ADVERTISEMENT

ರಬ್ಬರ್ ಬೆಳೆಗೆ ರಾಷ್ಟ್ರೀಯ ನೀತಿ ಜಾರಿಯಾಗಲಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 10:56 IST
Last Updated 13 ಸೆಪ್ಟೆಂಬರ್ 2022, 10:56 IST
   

ಉಜಿರೆ: ‘ಕೇಂದ್ರ ಸರ್ಕಾರ ರಬ್ಬರ್ ಬೆಳೆಗೆ ಸಿದ್ಧಪಡಿಸಿದ ರಾಷ್ಟ್ರೀಯ ನೀತಿಯ ಕರಡು ಪ್ರತಿ ಜಾರಿಯಾದರೆ ರಬ್ಬರ್ ಬೆಳೆಗೆ ಹಾಗೂ ಬೆಲೆಗೆ ಸ್ಥಿರತೆ ಸಿಗಲಿದೆ’ ಎಂದು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.

ಉಜಿರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸಂಘವು 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹76.20 ಲಕ್ಷ ಲಾಭಗಳಿಸಿದ್ದು, ಸದಸ್ಯರಿಗೆ ಶೇ.20 ರಷ್ಟು ಲಾಭಾಂಶ ವಿತರಿಸಲು ನಿರ್ಣಯಿಸಲಾಗಿದೆ. ಸಂಘವು 33 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ರಬ್ಬರ್‌ಗೆ ಕೆ.ಜಿಗೆ ಸರಾಸರಿ ₹166.74 ಧಾರಣೆ ನೀಡಲಾಗಿದೆ. ಸಂಘವು ಕಳೆದ ಹಣಕಾಸು ವರ್ಷದಲ್ಲಿ ₹ 15 ಕೋಟಿಗೂ ಹೆಚ್ಚಿನ ಮೊತ್ತವನ್ನು ’ಜಿಎಸ್‌ಟಿ’ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಿದೆ’ ಎಂದರು.

ADVERTISEMENT

ನಿರ್ದೇಶಕಎನ್. ಪದ್ಮನಾಭ, ಜಯಶ್ರೀ ಡಿಎಂ, ಭೈರಪ್ಪ ಕೆ, ರಾಮ ನಾಯ್ಕ್, ಸೋಮನಾಥ ಬಂಗೇರ, ಗ್ರೇಶಿಯಸ್ ವೇಗಸ್, ಇ.ಸುಂದರ ಗೌಡ, ಕೆಜೆ ಆಗಸ್ಟಿನ್, ವಿವಿ ಅಬ್ರಹಾಂ, ಬಾಲಕೃಷ್ಣ ಗೌಡ, ಅಬ್ರಾಹಂ ಬಿಎಸ್ ಇದ್ದರು. ಮಚ್ಚಿಮಲೆ ಅನಂತ ಭಟ್ ಸ್ವಾಗತಿಸಿದರು. ರಾಜು ಶೆಟ್ಟಿ ವರದಿ ವಾಚಿಸಿದರು. ನಿರ್ದೇಶಕ ಎಚ್. ಪದ್ಮಗೌಡ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.