ADVERTISEMENT

ಗರ್ಭಿಣಿಯರಿಗೆ ಸೀಮಂತ, ಆರೋಗ್ಯ ಜಾಗೃತಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 16:49 IST
Last Updated 28 ಅಕ್ಟೋಬರ್ 2024, 16:49 IST
ತರೀಕೆರೆ ಗಾಳಿಹಳ್ಳಿ – 1ನೇ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಸೀಮಂತ ಹಾಗೂ ಆರೋಗ್ಯ ಶಿಕ್ಷಣ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ತರೀಕೆರೆ ಗಾಳಿಹಳ್ಳಿ – 1ನೇ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಸೀಮಂತ ಹಾಗೂ ಆರೋಗ್ಯ ಶಿಕ್ಷಣ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು   

ತರೀಕೆರೆ: ಪಟ್ಟಣದ ಗಾಳಿಹಳ್ಳಿ – 1ನೇ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಜಿ.ಎಚ್. ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಆಶ್ರಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಹಾಗೂ ಆರೋಗ್ಯ ಶಿಕ್ಷಣ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚರಣ್ ರಾಜ್ ಮಾತನಾಡಿ, ಗರ್ಭಿಣಿಯರ ಆರೈಕೆ, ಆರೋಗ್ಯ, ವಿಶ್ರಾಂತಿ, ವ್ಯಾಯಾಮ ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವಾಣಿ ಶ್ರೀನಿವಾಸ್ ಮಾತನಾಡಿ, 12 ವರ್ಷಗಳಿಂದ ಈ ಸೀಮಂತ ಕಾರ್ಯಕ್ರಮವನ್ನು ಎಲ್ಲ ವಲಯ ಮಟ್ಟ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಹಿತ ಸೇವಾ ಸಂಸ್ಥೆಯಿಂದ ನಡೆಸಿಕೊಂಡು ಬರುತ್ತಿದ್ದೇವೆ. ಇದರಿಂದ ಗರ್ಭಿಣಿ ಮಹಿಳೆಯರಿಗೆ ಅನುಕೂಲವಾಗುತ್ತಿದೆ. ಕೆಲವರಿಗೆ ಅವರ ಮನೆಗಳಲ್ಲಿ ಸೀಮಂತ ಮಾಡಿಕೊಳ್ಳಲು ಸಾಮರ್ಥ್ಯ ಇರುವುದಿಲ್ಲ. ಆದ್ದರಿಂದ ನಮ್ಮ ಟ್ರಸ್ಟ್ ಮೂಲಕ ಅವರ ಈ ಆಸೆ ನೆರವೇರುತ್ತದೆ ಎಂದರು.

ADVERTISEMENT

ಶೋಭಾ ಹಾಗೂ ಗಾಯತ್ರಿ, ದಾಕ್ಷಾಯಿಣಿ ಆರೋಗ್ಯ ಇಲಾಖೆಯ ಸೇವೆಗಳು, ಸೌಲಭ್ಯಗಳು, ತಾಯಿ ಕಾರ್ಡ್ ಪಡೆಯುವ ಬಗ್ಗೆ ಮಾಹಿತಿ ನೀಡಿದರು.

ಪಂಕಜ ಹಾಗೂ ನೇತ್ರಮ್ಮ ಪ್ರಾರ್ಥಿಸಿದರು. ಮೇಲ್ವಿಚಾರಕಿ ದಾಕ್ಷಾಯಿಣಿ ಬಾಯಿ ನಿರೂಪಿಸಿದರು. ಶ್ವೇತಾ ಸ್ವಾಗತಿಸಿದರು. ಪಂಕಜ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ನೇತ್ರಮ್ಮ, ಶ್ವೇತಾ, ಇಂದಿರಾ, ಸವಿತಾ, ಮಂಜುಳಾ ಹಾಗೂ ಸಹಾಯಕಿ ಮಧುಮತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.