ಚಿಕ್ಕಮಗಳೂರು: ಶಿವಶರಣರು ಹಾಗೂ ಮಹನೀಯರ ಜಯಂತ್ಯುತ್ಸವಗಳು ಜಾತಿಗೆ ಸೀಮಿತವಾಗಬಾರದು ಎಂದು ಸವಿತಾ ಸಮಾಜದ ಮುಖಂಡ ವಿಶ್ವನಾಥ ಅಭಿಪ್ರಾಯಪಟ್ಟರು.
ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕುವೆಂಪು ಕಲಾಮಂದಿರದ ಹೇಮಾಂಗಣ ಸಭಾಂಗಣದಲ್ಲಿ ಏರ್ಪಡಿದ್ದ ಹಡಪದ ಅಪ್ಪಣ್ಣ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
12 ನೇ ಶತಮಾನದ ಶಿವಶರಣರ ಕಾಲದಲ್ಲಿ ಹಡಪದ ಅಪ್ಪಣ್ಣ ಕ್ಷೌರಿಕ ಕಾಯಕ ವೃತ್ತಿ ನಂಬಿ ಜೀವನ ನಡೆಸಿದರು. ವಚನ ಸಾಹಿತ್ಯದ ಮೂಲಕ ಸಾಮಾಜಿಕ ಸಂದೇಶ ನೀಡಿದರು. ಅವರ ತತ್ವ, ಕಾಯಕ ನಿಷ್ಠೆಯನ್ನುಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಕ್ಷೌರಿಕ ಸಮುದಾಯ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ಏಳಿಗೆ ಕಾಣಲು ಸಂಘಟಿತರಾಗಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ ರಮೇಶ್ ಅವರು ಹಡಪದ ಅಪ್ಪಣ್ಣ ಅವರ ಕುರಿತು ಪ್ರಾಸ್ತಾವಿವಾಗಿ ಮಾತನಾಡಿದರು. ಸವಿತಾ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಜೆ. ಸತ್ಯನಾರಾಯಣ, ಖಜಾಂಚಿ ಎಂ.ರಾಘವೇಂದ್ರ ಸಿ. ಮಾಧವ, ವಿಜಯಕುಮಾರ್, ರಶ್ಮಿ, ನಟರಾಜ್, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.