ADVERTISEMENT

ಕಾಶ್ಮೀರದ ತೀತ್ವಾಲ್‍ನಲ್ಲಿ ಶಾರದಾಂಬೆ ಪಂಚಲೋಹ ಮೂರ್ತಿ ಪ್ರಾಣ ಪ್ರತಿಷ್ಠೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 5:36 IST
Last Updated 7 ಜೂನ್ 2023, 5:36 IST
ಶೃಂಗೇರಿ ಶಾರದಾ ಪೀಠದ  ವಿಧುಶೇಖರ ಭಾರತಿ ಸ್ವಾಮೀಜಿ  ಕಾಶ್ಮೀರದ ತೀತ್ವಾಲ್‍ನಲ್ಲಿರುವ ಶಾರದಾ ದೇವಿ ದೇಗುಲದಲ್ಲಿ ಶೃಂಗೇರಿ ಶಾರದಾಂಬೆ ಪಂಚಲೋಹದ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೇರವೇರಿಸಿದರು
ಶೃಂಗೇರಿ ಶಾರದಾ ಪೀಠದ  ವಿಧುಶೇಖರ ಭಾರತಿ ಸ್ವಾಮೀಜಿ  ಕಾಶ್ಮೀರದ ತೀತ್ವಾಲ್‍ನಲ್ಲಿರುವ ಶಾರದಾ ದೇವಿ ದೇಗುಲದಲ್ಲಿ ಶೃಂಗೇರಿ ಶಾರದಾಂಬೆ ಪಂಚಲೋಹದ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೇರವೇರಿಸಿದರು   

ಶೃಂಗೇರಿ: ಕಾಶ್ಮೀರದ ತೀತ್ವಾಲ್‍ನ ಶಾರದಾ ದೇವಿ ದೇಗುಲದಲ್ಲಿ ಶೃಂಗೇರಿ ಶಾರದಾಂಬೆಯ ಪಂಚಲೋಹದ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಯನ್ನು ಸೋಮವಾರ ಶೃಂಗೇರಿ ಶಾರದಾ ಪೀಠದ ವಿಧುಶೇಖರಭಾರತೀ ಸ್ವಾಮೀಜಿ ನೇರವೇರಿಸಿದರು.

ಶಾರದಾಂಬೆ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕದ ಪ್ರಯುಕ್ತ ಭಾನುವಾರ ಮತ್ತು ಸೋಮವಾರ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ವಿಧುಶೇಖರಭಾರತೀ ಸ್ವಾಮೀಜಿ ಶಾರದಾ ಪೀಠದ ಆರಾಧ್ಯ ದೈವ ಶ್ರೀಚಕ್ರ ಯಂತ್ರ ಸ್ಥಾಪನೆ ಮಾಡಿ, ವಿಶೇಷ ಪೂಜೆ ಸಲ್ಲಿಸಿ, ಕಲಶ ಪೂಜೆಯೊಂದಿಗೆ ಕುಂಭಾಭಿಷೇಕ ನೆರವೇರಿಸಿದರು.

ಶಾರದಾ ಮಠದ ಪುರೋಹಿತರಾದ ಶಿವಕುಮಾರ ಶರ್ಮ, ತಂತ್ರಿ ಸೀತಾರಾಮ ಶರ್ಮ ನೇತೃತ್ವದ ತಂಡ ಧಾರ್ಮಿಕ ಕಾರ್ಯ ನಡೆಸಿಕೊಟ್ಟಿತು. ಜಮ್ಮು ಕಾಶ್ಮೀರದ ರಾಜ್ಯಪಾಲ ಮನೋಜ್ ಸಿನ್ಹಾ ಗುರುಗಳನ್ನು ಭೇಟಿ ಮಾಡಿದರು. ಶಾರದಾ ಮಠದ ಆಡಳಿತಾಧಿಕಾರಿ ವಿ.ಆರ್ ಗೌರೀಶಂಕರ್ ಮತ್ತು ಕಾಶ್ಮೀರದ ಪಂಡಿತರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.