ಕಡೂರು (ಚಿಕ್ಕಮಗಳೂರು ಜಿಲ್ಲೆ): ಬ್ಲೂ ಆರ್ಮಿ-ಮಾದಿಗರ ಧ್ವನಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷರಾಗಿ ಶೂದ್ರ ಶ್ರೀನಿವಾಸ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಸೋಮವಾರ ಕಡೂರಿನಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಶೂದ್ರ ಶ್ರೀನಿವಾಸ್ ಮಾತನಾಡಿ, ದಲಿತ ಹೋರಾಟದಲ್ಲಿಯೇ ತೊಡಗಿಸಿಕೊಂಡು ಶೋಷಿತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹೋರಾಡುತ್ತಿರುವ ಸಮಾನಮನಸ್ಕರ ಆಶಯದಂತೆ ಮಾದಿಗ ಸಮುದಾಯದ ಧ್ವನಿಯಾಗಿ ಬ್ಲೂ ಆರ್ಮಿ ಅಸ್ತಿತ್ವಕ್ಕೆ ಬಂದಿದೆ. ದಲಿತ ಪರ ಹೋರಾಟವೇ ಸಂಘಟನೆಯ ಗುರಿ. ಇದರ ಮೂಲಕ ನಮ್ಮ ದಲಿತ ಪರ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದರು.
ರಾಜ್ಯ ಸಮಿತಿ ಕಾರ್ಯಾಧ್ಯಕ್ಷರಾಗಿ ಬಿ.ರುದ್ರಪ್ಪ, ಉಪಾಧ್ಯಕ್ಷರಾಗಿ ಹುಲ್ಲೇಹಳ್ಳಿ ಲಕ್ಷ್ಮಣ್, ಸಗನಪ್ಪ, ಬಾಸೂರು ಸುರೇಶ್, ನಾಗರಾಜ್ ಸಖರಾಯಪಟ್ಟಣ, ಕಾರ್ಯಕಾರಿ ಸದಸ್ಯರಾಗಿ ತಂಗಲಿ ರಾಘವೇಂದ್ರ, ಕೇದಿಗೆರೆ ಬಸವರಾಜ್, ಬಾಸೂರು ಪ್ರಸನ್ನ, ಕಡೂರಹಳ್ಳಿ ಪ್ರಶಾಂತ್, ಶಾಂತಮೂರ್ತಿ, ಗೋವಿಂದಪ್ಪ, ಕೋಶಾಧ್ಯಕ್ಷರಾಗಿ ಕೆ.ರಂಗಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು.
ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆ.ವೈ.ವಾಸು, ಕಾರ್ಯಾಧ್ಯಕ್ಷರಾಗಿ ವೈ.ಟಿ.ಗೋವಿಂದಪ್ಪ, ಕಡೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಗಂಗರಾಜು, ಕಾರ್ಯಾಧ್ಯಕ್ಷರಾಗಿ ಕಸವನಹಳ್ಳಿ ಬಸವರಾಜು ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.