ಶೃಂಗೇರಿ: ಶಾರದಾ ಮಠದಲ್ಲಿ ಭಾನುವಾರ ಶಾರದಾ ದೇವಿಗೆ ವೀಣಾಲಂಕಾರವನ್ನು ಮಾಡಲಾಗಿತ್ತು.
ವೇದಗಳ ಪಾರಾಯಣ, ಪ್ರಸ್ಥಾನತ್ರಯ ಭಾಷ್ಯಪಾರಾಯಣ, ಮಹಾವಿದ್ಯೆ, ದುರ್ಗಾ ಸಪ್ತಶತಿ, ಮುಂತಾದ ಪಾರಾಯಣಗಳು ಮತ್ತು ಸೂರ್ಯ ನಮಸ್ಕಾರ, ಭುವನೇಶ್ವರಿ ಜಪ, ದುರ್ಗಾ ಜಪ ಮುಂತಾದ ಜಪಗಳು, ಕುಮಾರಿ ಹಾಗೂ ಸುಹಾಸಿನಿ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಗಳು ನಡೆಯಿತು. ಕಿರಿಯ ಗುರುಗಳಾದ ವಿಧುಶೇಖರಭಾರತಿ ಸ್ವಾಮೀಜಿಯವರು ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು.
ಬೀದಿ ಉತ್ಸವ: ಶಾರದಾ ಮಠದಲ್ಲಿ ಸಂಜೆ ನಡೆದ ಬೀದಿ ಉತ್ಸವದಲ್ಲಿ ಬೇಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರು ಭಾಗವಹಿಸಿದ್ದರು. ಬಿದರಗೋಡು ರಾಮದೇವಸ್ಥಾನ, ಬೇಗಾರು ಗಣಪತಿ ಅಂಜನೇಯ ದೇವಸ್ಥಾನ, ಕೋಟೆ ಸೋಮೇಶ್ವರ ದೇವಾಲಯ, ಹರಾವರಿ ಮತ್ತು ಹಗ್ಗುರಡಿ ಮಲ್ಲಿಕಾರ್ಜುನ ದೇವಸ್ಥಾನ, ಅಸನಬಾಳು ಗುತ್ಯಮ್ಮ ಮುಂತಾದ ದೇವಾಲಯಗಳ ಪದಾಧಿಕಾರಿಗಳು, ಕುಲಾಲ ಸಂಘ ಮತ್ತು ಮೊಗವೀರ ಸಮಾಜ, ರಾಜ್ಯ ಸರ್ಕಾರ ನೌಕರರ ಸಂಘ, ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಭಾಗವಹಿಸಿದರು.
ವಿಧುಶೇಖರಭಾರತಿ ಸ್ವಾಮೀಜಿ ಕಿರೀಟ, ಆಭರಣಗಳನ್ನು ಧರಿಸಿ ದರ್ಬಾರು ನಡೆಸಿದರು. ಶಿವಮೊಗ್ಗದ ರೇಖಾ ಸುಬ್ರಹ್ಮಣ್ಯ ಮತ್ತು ಸಂಗಡಿಗ ರಿಂದ ವೀಣಾವಾದನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.