ನರಸಿಂಹರಾಜಪುರ: ಪಟ್ಟಣದ ಅಗ್ರಹಾರದಲ್ಲಿರುವ ಶ್ರೀರಾಮ ಸೇವಾ ಸಮಿತಿಯಿಂದ 8 ದಿನಗಳ ಕಾಲ ನಡೆಯುವ ರಾಮೋತ್ಸವಕ್ಕೆ ಉಮಾಮಹೇಶ್ವರ ಸಮುದಾಯಭವನದಲ್ಲಿ ಬುಧವಾರ ಚಾಲನೆ ನೀಡಲಾಯಿತು.
ರಾಮನವಮಿ ಅಂಗವಾಗಿ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ ವಾಚನ, ಮಂಟಪ ಪ್ರತಿಷ್ಠೆ, ಸೀತಾರಾಮರ ಕಲ್ಪೋಕ್ತ ಪೂಜೆ, ಮಧ್ಯಾಹ್ನ 12ಕ್ಕೆ ತೀರ್ಥಪ್ರಸಾದ ವಿನಿಯೋಗ ನಡೆಯಿತು.
ನಿವೃತ್ತ ಕನ್ನಡ ಪಂಡಿತ ವಿ.ಎಸ್.ಕೃಷ್ಣ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆದವು. ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷ ಎಚ್.ಎನ್.ಶಿವಶಂಕರ್, ಶೈಲಾ ಶಿವಶಂಕರ್, ಭಾಗ್ಯನಂಜುಂಡಸ್ವಾಮಿ ಇದ್ದರು. ಸಂಜೆ ಭಾರತೀ ಭಕ್ತವೃಂದ, ಶಾರದಾ ಮಾತಾ ಭಕ್ತ ವೃಂದದವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.