ತರೀಕೆರೆ: ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದು, ಸೂಕ್ತ ಮಾರ್ಗದರ್ಶನ ಸಿಕ್ಕಿದ್ದೇ ಆದರೆ ಉನ್ನತಮಟ್ಟಕ್ಕೆ ತಲುಪುವುದರಲ್ಲಿ ಅನುಮಾನವಿಲ್ಲ. ದಾನಿಗಳು ಗ್ರಾಮೀಣ ಭಾಗದ ಶಾಲೆಗಳಿಗೆ ಕಲಿಕಾ ಸಾಮಾಗ್ರಿಗಳನ್ನು ನೀಡಿ ಪ್ರೋತ್ಸಾಹ ನೀಡಬೇಕು’ ಎಂದು ಶ್ರೀಸೂರ್ಯನಾರಾಯಣ ಸಾಮಾಜಿಕ ಸೇವಾ ಸಮಿತಿಯ ಅಧ್ಯಕ್ಷ ಕವಿತ ಹೇಳಿದರು.
ಬೀರೂರು ಶೈಕ್ಷಣಿಕ ವಲಯದ ಶಂಕರಘಟ್ಟ ಹುಲಿತಿಮ್ಮಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ ಕ್ಲಾಸ್ ನಡೆಸಲು ಶ್ರೀಸೂರ್ಯನಾರಾಯಣ ಸಾಮಾಜಿಕ ಸೇವಾ ಸಮಿತಿ ಲಕ್ಕೇನಹಳ್ಳಿ ವತಿಯಿಂದ ಶಾಲೆಗೆ ಸ್ಮಾರ್ಟ ಟಿ.ವಿ. ಮತ್ತು ಇನ್ನಿತರೆ ಅಗತ್ಯ ಸಲಕರಣೆಗಳನ್ನು ಮುಖ್ಯ ಶಿಕ್ಷಕ ಸಿ. ಕೃಷ್ಣಮೂರ್ತಿ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
‘ಮಕ್ಕಳು ಪ್ರಾಥಮಿಕ ಹಂತದಲ್ಲೇ ಕನ್ನಡದ ಜೊತೆಗೆ ಆಂಗ್ಲ ಭಾಷಾ ಜ್ಞಾನ ಹೊಂದಿದ್ದರೆ ಮುಂದೆ ತಾಂತ್ರಿಕ, ವೈದ್ಯಕೀಯ ಮತ್ತು ಇನ್ನಿತರೆ ಕಲಿಕಾ ಹಂತದಲ್ಲಿ ಸುಲಭವಾಗಿ ಗುರಿ ತಲುಪಬಹುದು’ ಎಂದರು.
ಲಿಂಗದಹಳ್ಳಿ ಕ್ಲಸ್ಟರ್ ಸಿ.ಅರ್.ಪಿ. ಅರ್ಚನ ಮತ್ತು ಗುರು ಪ್ರಸಾದ್, ಕಾರ್ಯದರ್ಶಿ ಮಂಜುನಾಥ, ಉಪ ಕಾರ್ಯದರ್ಶಿ ರಾಹುಲ್ ನಾಯಕ್, ಸದಸ್ಯ ತಂಗರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.