ಕೊಟ್ಟಿಗೆಹಾರ: ಬಣಕಲ್‌ನ ಬಿನ್ನಡಿ ಗ್ರಾಮದ ರೈತ ಕಿಶೋರ್ ಅವರ ಗದ್ದೆಯಲ್ಲಿ ಮಂಗಳವಾರ ಭತ್ತದ ನಾಟಿ ಸಂಭ್ರಮದಿಂದ ನಡೆಯಿತು. ಬಿನ್ನಡಿ, ಹೆಬ್ಬರಿಗೆ ಸುತ್ತಲಿನ ಕಾರ್ಮಿಕರು ಜಾನಪದ ಗೀತೆಗಳನ್ನು ಹಾಡುತ್ತಾ ಭತ್ತದ ನಾಟಿಯಲ್ಲಿ ಭಾಗವಹಿಸಿದರು.
ಕೆಲವು ರೈತರು ಭತ್ತದ ಗದ್ದೆ ಕೃಷಿ ಮಾಡದೆ ಹಾಗೆಯೇ ಪಾಳು ಬಿಟ್ಟಿದ್ದಾರೆ' ಎಂದು ಅತ್ತಿಗೆರೆ ಎ.ಬಿ.ಕೃಷ್ಣೇಗೌಡ ಹೇಳಿದರು.
'ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಉತ್ತಮ ಇಳುವರಿ ಕೊಡುವ ಬಿತ್ತನೆ ಬೀಜ ಪಡೆಯಬಹುದು.ರೈತರಿಗಾಗಿಯೇ ಸರ್ಕಾರದಿಂದ ವಿವಿಧ ಯೋಜನೆಗಳಿವೆ‘ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಬಣಕಲ್ ಕೃಷಿ ಅಧಿಕಾರಿ ಎಂ.ಆರ್. ವೆಂಕಟೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.