ADVERTISEMENT

ಹಿರೇಗದ್ದೆ | 302 ಎಕರೆ ಪ್ರದೇಶ ಮೀಸಲು ಅರಣ್ಯವೆಂದು ಘೋಷಿಸಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 13:51 IST
Last Updated 10 ಆಗಸ್ಟ್ 2023, 13:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಾಳೆಹೊನ್ನೂರು: ಕೊಪ್ಪ ತಾಲ್ಲೂಕು ಮೇಗುಂದಾ ಹೋಬಳಿಯ ಹಿರೇಗದ್ದೆ ಗ್ರಾಮದ 302 ಎಕರೆ ಪ್ರದೇಶವನ್ನು ಸರ್ಕಾರ ‘ಮೀಸಲು ಅರಣ್ಯ’ ಎಂದು ಘೋಷಿಸಿದೆ.

ನವೆಂಬರ್‌ 23, 2011ರಲ್ಲಿ ಹಿರೇಗದ್ದೆ ಗ್ರಾಮದ ಒಂದರಿಂದ ಐದರವರೆಗಿನ ಬ್ಲಾಕ್ ಒಳಗೊಂಡ 302 ಎಕರೆ ಪ್ರದೇಶವನ್ನು ಮೀಸಲು ಅರಣ್ಯ ಎಂದು ಘೋಷಿಸಲು ಉದ್ದೇಶಿಸಿದ್ದು, ಜನವರಿ 10, 2013ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.

ಇದೀಗ ಚಿಕ್ಕಮಗಳೂರು ಜಿಲ್ಲಾಧಿಕಾರಿ, ಕಡೂರಿನ ಅರಣ್ಯ ವ್ಯವಸ್ಥಾಪನಾಧಿಕಾರಿ, ಕೊಪ್ಪ ಉಪ ಸಂರಕ್ಷಣಾಧಿಕಾರಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನಲೆಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ -17ರ ಅಡಿಯಲ್ಲಿನ ಹಿರೇಗದ್ದೆ ಬ್ಲಾಕ್ ಒಂದರಿಂದ ಐದರವರೆಗಿನ ಒಟ್ಟು 302 ಎಕರೆ ಪ್ರದೇಶವನ್ನು ಜು.5, 2023ರಿಂದ ಜಾರಿಗೆ ಬರುವಂತೆ ಮೀಸಲು ಅರಣ್ಯ ಎಂದು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.

ADVERTISEMENT

ಇದೇ ರೀತಿ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಮಧುಗುಂಡಿ ಬ್ಲಾಕ್ ಒಂದರಿಂದ ಐದರವರೆಗಿನ 640 ಎಕರೆ 35 ಗುಂಟೆ, ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಬ್ಲಾಕ್ ನ 36 ಎಕರೆ 21 ಗುಂಟೆ ಪ್ರದೇಶವನ್ನೂ ಸರ್ಕಾರ ಮೀಸಲು ಅರಣ್ಯ ಎಂದು ಘೋಷಿಸಿ ಆದೇಶ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.