ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ 14 ಗ್ರಾಮ ಪಂಚಾಯಿತಿಗಳಿದ್ದು, ಇದರಲ್ಲಿ ವಸತಿ ರಹಿತ ಮತ್ತು ನಿವೇಶನ ರಹಿತ ಕುಟುಂಬಗಳ ಸಮೀಕ್ಷೆಯನ್ನು ಮಾಡಲಾಗಿದ್ದು, ಪರಿಶಿಷ್ಟಜಾತಿ, ಪಂಗಡ, ಸಾಮಾನ್ಯ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಸಾಕಷ್ಟು ಕುಟುಂಬಗಳು ವಸತಿ ಹಾಗೂ ನಿವೇಶನ ರಹಿತವಾಗಿವೆ.
ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 57 ವಸತಿ ರಹಿತ ಕುಟುಂಬಗಳು, 199 ನಿವೇಶನ ರಹಿತ ಕುಟುಂಬಗಳು, ಮಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 47 ವಸತಿರಹಿತ, 54 ನಿವೇಶನರಹಿತ ಕುಟುಂಬಗಳು, ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 53 ವಸತಿ ರಹಿತ ಕುಟುಂಬಗಳು,145 ನಿವೇಶನರಹಿತ ಕುಟುಂಬಗಳು, ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 80 ವಸತಿರಹಿತ ಕುಟುಂಬಗಳು,122 ನಿವೇಶರಹಿತ ಕುಟುಂಬಗಳು, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 356 ವಸತಿ ರಹಿತ ಕುಟುಂಬಗಳು, 231 ನಿವೇಶನರಹಿತ ಕುಟುಂಬಗಳಿವೆ.
ಮಾಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 18 ವಸತಿ ರಹಿತ ಕುಟುಂಬಗಳು,109 ನಿವೇಶನ ರಹಿತ ಕುಟುಂಬಗಳು, ಗುಬ್ಬಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 70 ವಸತಿ ರಹಿತ ಕುಟುಂಗಳು, 112 ನಿವೇಶನ ರಹಿತ ಕುಟುಂಬಗಳು, ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 60 ವಸತಿ ರಹಿತ ಕುಟುಂಬಗಳು,41 ನಿವೇಶನರಹಿತ ಕುಟುಂಬಗಳು, ಕರ್ಕೇಶ್ವರ (ಮೇಲ್ಪಾಲ್) 67 ವಸತಿರಹಿತ ಕುಟುಂಬಗಳು, 137 ನಿವೇಶನ ರಹಿತ ಕುಟುಂಬಗಳು, ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 82 ವಸತಿರಹಿತ ಕುಟುಂಬಗಳು, 168 ನಿವೇಶನರಹಿತ ಕುಟುಂಬಗಳು, ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 79 ವಸತಿ ರಹಿತ ಕುಟುಂಬಗಳು, 86 ನಿವೇಶನ ರಹಿತ ಕುಟುಂಬಗಳು, ಆಡುವಳ್ಳಿ (ಗಡಿಗೇಶ್ವರ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 46 ವಸತಿರಹಿತ,181 ನಿವೇಶನ ರಹಿತ ಕುಟುಂಬಗಳು, ಬನ್ನೂರು 86 ವಸತಿ ರಹಿತ, 175 ನಿವೇಶನರಹಿತ ಕುಟುಂಬಗಳು, ಬಿ.ಕಣಬೂರು (ಬಾಳೆಹೊನ್ನೂರು) ಗ್ರಾಮ ಪಂಚಾಯಿತಿಯಲ್ಲಿ 130 ವಸತಿರಹಿತ ಹಾಗೂ 441 ನಿವೇಶನ ರಹಿತ ಕುಟುಂಬಗಳಿವೆ.
ಸೀತೂರು ಗ್ರಾಮ ಪಂಚಾಯಿತಿಯಲ್ಲಿ 100 ನಿವೇಶನಗಳನ್ನು ನೀಡಲು ಜಾಗ ಸಿದ್ದವಾಗಿದೆ. ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 34 ಗುಂಟೆ ಜಾಗ ಗುರುತಿಸಿದ್ದ ಇಲ್ಲಿ 20 ನಿವೇಶನಗಳನ್ನು ನೀಡಲಾಗುವುದು. ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಆಶ್ರಯ ಲೇಔಟ್ ನಿರ್ಮಾಣಕ್ಕೆ ಜಾಗ ಮಂಜೂರಾಗಿದೆ. ಉಳಿದ ಕಡೆ ನಿವೇಶನ ಗುರುತಿಸಲು ಅರಣ್ಯ ಇಲಾಖೆ ಜಾಗ ತಮ್ಮದೆಂದು ಹೇಳುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ.ನವೀನ್ ಕುಮಾರ್ ಹೇಳಿದರು.
ವಸತಿ ರಹಿತರು ಮತ್ತು ನಿವೇಶನ ರಹಿತರ ಒಟ್ಟು ಸಂಖ್ಯೆ 3432 3 ಗ್ರಾಮ ಪಂಚಾಯಿತಿಗಳಲ್ಲಿ ನಿವೇಶನ ಗುರುತು ಉಳಿದೆಡೆ ಜಾಗ ಗುರುತಿಸಲು ಅರಣ್ಯ ಇಲಾಖೆ ತಕರಾರು
ಹಕ್ಕು ಪತ್ರ...
ತಾಲ್ಲೂಕಿನ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡವರಿಗೆ 94ಸಿಸಿ ಅಡಿ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಕಂದಾಯ ಮತ್ತು ಅರಣ್ಯ ಜಮೀನಿನ ಜಂಟಿ ಸರ್ವೆ ನಡೆಯುತ್ತಿದ್ದು ಇದು ಪೂರ್ಣಗೊಂಡ ನಂತರ ಹಾಗೂ ನಿವೇಶನ ರಹಿತರಿಗೆ ನಿವೇಶನ ನೀಡಲು ಸರ್ಕಾರ ಟಾಸ್ಕ್ ಫೋರ್ಸ್ ಸಮಿತಿ ನೇಮಿಸುತ್ತಿದ್ದು ಇದು ನೇಮಕವಾದ ಕೂಡಲೇ ನಿವೇಶನ ರಹಿತರಿಗೆ ನಿವೇಶನ ನೀಡಿ ವಸತಿ ನಿರ್ಮಿಸಿಕೊಡಲಾಗುವುದು. ಈ ಬಗ್ಗೆ ನಿರಂತರ ಪ್ರಯತ್ನ ಮುಂದುವರೆದಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಪ್ರಜಾವಾಣಿ ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.