ADVERTISEMENT

ಕಡೂರು | ರಸ್ತೆ ಬದಿ ಪಾರ್ಕಿಂಗ್‌ ಸಮಸ್ಯೆ: ಪಾದಚಾರಿಗಳಿಗೆ ತೊಂದರೆ

ಬಾಲು ಮಚ್ಚೇರಿ
Published 17 ಜುಲೈ 2024, 5:22 IST
Last Updated 17 ಜುಲೈ 2024, 5:22 IST
ಅಂಬೇಡ್ಕರ್ ವೃತ್ತದ ಬಳಿ ಸೂಚನಾ ಫಲಕ ಗಮನಿಸದೆ ನುಗ್ಗುತ್ತಿರುವ ವಾಹನ ಸವಾರರು
ಅಂಬೇಡ್ಕರ್ ವೃತ್ತದ ಬಳಿ ಸೂಚನಾ ಫಲಕ ಗಮನಿಸದೆ ನುಗ್ಗುತ್ತಿರುವ ವಾಹನ ಸವಾರರು    

ಕಡೂರು: ಪಟ್ಟಣದ ಬಸವೇಶ್ವರ ವೃತ್ತದಿಂದ ಕೆ.ಎಲ್.ವಿ.ವೃತ್ತದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿನ ಮೆಸ್ಕಾಂ ಕಚೇರಿ ಎದುರು ರಸ್ತೆ ಬದಿ ದಿನವಿಡೀ ಕ್ರೇನ್‌ ನಿಲ್ಲಿಸಲಾಗಿರುತ್ತದೆ. ಪೊಲೀಸರು ಬಹಳಷ್ಟು ಬಾರಿ ಸೂಚನೆ ನೀಡಿದರೂ ಇದೇ ಪರಿಪಾಟ ಮುಂದುವರಿದಿದೆ.

ಪಟ್ಟಣದ ಪ್ರವಾಸಿ ಮಂದಿರದ ಕಡೆಯಿಂದ ಬರುವ ವಾಹನಗಳು ಅಂಬೇಡ್ಕರ್ ಪ್ರತಿಮೆ ಬಳಿ ಕಾಂಗ್ರೆಸ್ ಕಚೇರಿ ಎದುರು ಎಡಗಡೆ  ತಿರುಗಿ ಹೆದ್ದಾರಿಯಲ್ಲಿ ಯೂಟರ್ನ್ ತೆಗೆದುಕೊಂಡು ಮರವಂಜಿ ರಸ್ತೆಯ ಕಡೆ ತಿರುಗಬೇಕು. ಅಲ್ಲಿ ಎಡಕ್ಕೆ ಚಲಿಸಿ ಎಂಬ ಫಲಕ ಹಾಕಲಾಗಿದೆ. ಆದರೆ, ಸವಾರರು ಇದನ್ನು ಗಮನಿಸದ ಕಾರಣ ಸಂಚಾರ ದಟ್ಟಣೆ ಆಗುತ್ತಿದೆ. ಈ ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯನ್ನಾಗಿಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕರದ್ದು. ತಾಲ್ಲೂಕು ಕಚೇರಿಯ ಮುಂದೆ ವಾಹನಗಳನ್ನು ನಿಲ್ಲಿಸಲು ಅವಕಾಶ ಇಲ್ಲ.ಇದರಿಂದ ಸಾಕಷ್ಟು ಜನರು ಪ್ರವಾಸಿ ಮಂದಿರದ ರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸಿ ಹೋಗುವುದರಿಂದ ಇಲ್ಲಿಯೂ ವಾಹನ ದಟ್ಟಣೆ ಉಂಟಾಗುತ್ತಿದೆ.

ಬಸವೇಶ್ವರ ವೃತ್ತದ ಬಳಿ ಎರಡೂ ಸಂಪರ್ಕ ರಸ್ತೆಗಳು ವಾಹನ ನಿಲುಗಡೆಗಾಗಿ ಬಳಕೆಯಾಗುತ್ತಿವೆ. ವೃತ್ತದ ಬಳಿ ದ್ವಿಚಕ್ರ ವಾಹನ ಸವಾರರು ಎಲ್ಲೆಂದರಲ್ಲಿ ನುಗ್ಗುತ್ತಾರೆ. ಪಟ್ಟಣದೊಳಗೆ ಮತ್ತು ಗ್ರಾಮೀಣ ಭಾಗದಲ್ಲಿ ಟಾರ್ಪಲ್‌ ಮುಚ್ಚದೆ ಲಾರಿಗಳಲ್ಲಿ ಜಲ್ಲಿ, ಎಂ.ಸ್ಯಾಂಡ್‌ ಸಾಗಿಸುವುದರಿಂದ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT
ಟಾರ್ಪಾಲ್ ಮುಚ್ಚದೆ ಜಲ್ಲಿ ಎಂ.ಸ್ಯಾಂಡ್ ಸಾಗಿಸುವ ಲಾರಿಗಳು
ಕಡೂರು ಪಟ್ಟಣದೊಳಗೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೆ ನಿಲ್ಲವ ವಾಹನಗಳು
ಪೊಲೀಸರ ಸೂಚನೆಯನ್ನು ಸಾರ್ವಜನಿಕರು ಪಾಲಿಸಬೇಕು. ವಾಹನ ದಟ್ಟಣೆ ನಿಲುಗಡೆ ಸಮಸ್ಯೆಗೆ ಕೇವಲ ಪೊಲೀಸರನ್ನೇ ಹೊಣೆಯಾಗಿಸುವುದು ಸರಿಯಲ್ಲ.
-ಉಮಾಶಂಕರ್, ಮಲ್ಲೇಶ್ವರ
ಸುಗಮ ಸಂಚಾರಕ್ಕಾಗಿ ಹಲವು ಕ್ರಮ ಕೈಗೊಂಡರೂ ಸಾರ್ವಜನಿಕರ ಸಹಕಾರ ಶೂನ್ಯವಾಗಿದೆ. ಕಠಿಣ ಕ್ರಮದ ಜತೆಗೆ ದಂಡವನ್ನೂ ವಿಧಿಸಲಾಗುವುದು
-ಪವನ್ ಕುಮಾರ್, ಪಿಎಸ್‌ಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.