ಚಿಕ್ಕಮಗಳೂರು: ತಾಲ್ಲೂಕಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ಸಂದಲ್ ಉರುಸ್ ಶುಕ್ರವಾರ ಆರಂಭವಾಯಿತು. ನಾಡಿನ ವಿವಿಧೆಡೆಗಳಿಂದ ಮುಸ್ಲಿಂ ಭಕ್ತರು ಗಿರಿಗೆ ಬಂದಿದ್ದು, ದರ್ಗಾದ ಮುಂಭಾಗದ ರಸ್ತೆಯಲ್ಲಿ ಸಂಜೆ ಮೆರವಣಿಗೆ ನಡೆಯಿತು.
ಶಾಖಾದ್ರಿ ಪ್ರತಿಭಟನೆ:ಶಾಖಾದ್ರಿ ಸಯ್ಯದ್ ಗೌಸ್ ಮೊಯುದ್ದೀನ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿಲ್ಲ. ದರ್ಗಾ ಪಕ್ಕದ ಶಾಖಾದ್ರಿ ಕೊಠಡಿ ಬಳಿ ಸಮುದಾಯದವರೊಂದಿಗೆ ಕುಳಿತಿದ್ದರು.
ಶಾಖಾದ್ರಿ ಅವರು ಗುಹೆಯೊಳಗೆ ಹೋಗಿ ಸಾಂಪ್ರದಾಯಿಕ ವಿಧಿ ನಡೆಸಲು ಅನುಮತಿ ನೀಡುವಂತೆ ಜಿಲ್ಲಾಡಳಿತವನ್ನು ಕೋರುವ ಪರಿಪಾಟ ಕೆಲ ವರ್ಷಗಳಿಂದ ಇತ್ತು. ಶಾಖಾದ್ರಿ ಅವರು ದರ್ಗಾ ಪ್ರವೇಶ ದ್ವಾರದ ಗೇಟಿನವರೆಗೂ ಮೆರವಣಿಗೆಯಲ್ಲಿ ತೆರಳಿ, ಅಲ್ಲಿ ಸ್ವಲ್ಪಹೊತ್ತು ಕಾಯ್ದು ಕೊಠಡಿಗೆ ಮರಳುತ್ತಿದ್ದರು.
‘ಪ್ರತಿ ವರ್ಷವೂ ಅದೇ ಉತ್ತರ ಹೇಳುತ್ತಾರೆ. ಮನವಿಯಿಂದ ಯಾವುದೇ ಉಪಯೋಗ ಆಗಿಲ್ಲ.ಈ ವರ್ಷ ಪ್ರತಿಭಟನೆ ಮಾರ್ಗ ಹಿಡಿದಿದ್ದೇನೆ’ ಎಂದು ಶಾಖಾದ್ರಿ ಸಯ್ಯದ್ ಗೌಸ್ ಮೊಯುದ್ದೀನ್ ಅವರು ‘ಪ್ರಜಾವಾಣಿ’ಗೆತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.