ಕಡೂರು: ತರಕಾರಿ ಬೆಲೆ ಮತ್ತೆ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಆದರೆ, ಬೆಲೆ ಏರಿಕೆ ಲಾಭ ವ್ಯಾಪಾರಿಗಳಿಗೆ ಮಾತ್ರ ಸಿಗುತ್ತಿದೆಯೇ ಹೊರತು ರೈತರಿಗೆ ವರ್ಗಾವಣೆ ಆಗುತ್ತಿಲ್ಲ.
ಯಾವುದೇ ತರಕಾರಿಯ ಬೆಲೆ ಕೇಳಿದರೂ ಹೌಹಾರುವ ಸರದಿ ಗ್ರಾಹಕರದ್ದು. ಒಂದು ಕೆ.ಜಿ. ತರಕಾರಿ ಖರೀದಿಸುತ್ತಿದ್ದವರು ಈಗ ಕಾಲು ಕೆ.ಜಿ ಸಾಕೆನ್ನುತ್ತಿದ್ದಾರೆ. ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದರೂ, ತರಕಾರಿ ಬೆಲೆ ಇಳಿದಿಲ್ಲ. ಅದಕ್ಕೂ ಮುನ್ನ ಮಳೆಯಿಲ್ಲದೆ ರೈತರು ಹೆಚ್ಚು ತರಕಾರಿ ಬೆಳೆದಿರಲಿಲ್ಲ. ಹಾಗಾಗಿ ಸದ್ಯ ಮಾರುಕಟ್ಟೆಗೆ ತರಕಾರಿ ಆವಕ ಕಡಿಮೆ ಇದೆ. ಸ್ಥಳೀಯ ವ್ಯಾಪಾರಿಗಳು ಚಿಕ್ಕಮಗಳೂರು, ಭದ್ರಾವತಿ ಮೊದಲಾದ ಊರುಗಳಿಂದ ತರಕಾರಿ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ.
ಟೊಮೆಟೊ ಬೆಲೆ 1 ಕೆಜಿಗೆ ₹40, ಬೀನ್ಸ್ ₹200 ಆಗಿದೆ. ಇದ್ದುದ್ದರಲ್ಲೇ ಹಸಿಮೆಣಸಿನಕಾಯಿ ಬೆಲೆ ಮಾತ್ರ 1 ಕೆ.ಜಿಗೆ ₹60 ಇದ್ದು, ಇದೇ ಕಡಿಮೆ ದರದ ತರಕಾರಿಯಾಗಿದೆ. ಈರುಳ್ಳಿ ಬೆಲೆ ₹20ರಿಂದ ₹25ರವರೆಗೆ ಇದೆ. ಬೆಳ್ಳುಳ್ಳಿ ₹150, ಶುಂಠಿ ₹80 ಸಗಟು ಬೆಲೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.