ಮೊಳಕಾಲ್ಮುರು: ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ಇದನ್ನು ಅರಿತು ಮಹಿಳೆಯರು ಶಿಕ್ಷಣದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಎಸ್. ತಿಪ್ಪೇಸ್ವಾಮಿ ಹೇಳಿದರು.
ಮಹಿಳಾ ಸಾಮಖ್ಯ, ಜನಸಂಸ್ಥಾನ ಸಂಸ್ಥೆ, ವೆಡ್ಸ್ ಸಂಸ್ಥೆ ಆಶ್ರಯದಲ್ಲಿ ಗುರುಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕ ಸ್ವಾವಲಂಬನೆ ಕಾರ್ಯಗಳನ್ನು ಕೈಗೊಳ್ಳುವ ಜತೆಗೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕು. ಮುಖ್ಯವಾಗಿ ಮಹಿಳೆಯರು ಶಿಕ್ಷಣ ಪಡೆದಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ಮಹಿಳಾ ಸಾಮಖ್ಯ ರಾಜ್ಯ ಸಂಚಾಲಕಿ ಅಮೃತಾ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಇಒ ಸಿ.ಎನ್. ಚಂದ್ರಶೇಖರ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರುಕ್ಷ್ಮಿಣಿ, ಅಬಕಾರಿ ಇಲಾಖೆಯ ಜಯಲಕ್ಷ್ಮೀ, ಜನ ಸಂಸ್ಥಾನ ವಿರೂಪಾಕ್ಷಪ್ಪ, ವೆಡ್ಸ್ ಗಂಗಾಧರ್, ಮಹಿಳಾ ಸಾಮಖ್ಯದ ತ್ರಿವೇಣಿ, ಗೀತಾ, ಗಂಗಾ, ಸಿಪಿಐನ ಜಾಫರ್ ಷರೀಫ್, ಜಿ. ಶ್ರೀನಿವಾಸ ಮೂರ್ತಿ, ವಿ. ಮಾರನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.