ADVERTISEMENT

ಹಿರಿಯೂರಿನಲ್ಲಿ ಅಪಘಾತ: ಇಬ್ಬರು ಕುರಿಗಾಹಿಗಳು ಸಾವು

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 5:04 IST
Last Updated 1 ಜೂನ್ 2024, 5:04 IST
   

ಹಿರಿಯೂರು: ನಗರದ ಹೊರವಲಯದ ಚಳ್ಳಕೆರೆ ರಸ್ತೆಯಲ್ಲಿ ಸರಕು ಸಾಗಣೆ ವಾಹನ ಮತ್ತು ಲಾರಿ ನಡುವೆ ಶನಿವಾರ ನಸುಕಿನಲ್ಲಿ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಕುರಿಗಾಯಿಗಳು ಮೃತಪಟ್ಟಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಹುಲಿಕುಂಟೆ ಗ್ರಾಮದ ರಮೇಶ್ (38 ) ಹಾಗೂ ಬೆಳಗೆರೆ ಗ್ರಾಮದ ಶಿವಲಿಂಗಪ್ಪ (60) ಮೃತಪಟ್ಟವರು. ಹಿರಿಯೂರಿನಲ್ಲಿ ಶನಿವಾರ ನಡೆಯುವ ಕುರಿ ಮಾರುಕಟ್ಟೆಗೆ ಮಿನಿ ಸರಕು ಸಾಗಣೆ ವಾಹನದಲ್ಲಿ ಕುರಿಗಳನ್ನು ತರುತ್ತಿರುವಾಗ ಅಪಘಾತ ಸಂಭವಿಸಿದೆ.

ಚಳ್ಳಕೆರೆ ಕಡೆಯಿಂದ ಬರುತ್ತಿದ್ದ ಮಿನಿ ಸರಕು ಸಾಗಣೆ ವಾಹನ ಹಾಗೂ ಹಿರಿಯೂರಿನಿಂದ ಹೊರಟಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇಬ್ಬರು ಕುರಿಗಾಹಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.