ADVERTISEMENT

ಹೊಳಲ್ಕೆರೆ: ₹50 ಸಾವಿರ ಮೌಲ್ಯದ ಗಾಂಜಾ ಗಿಡ ವಶ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 11:24 IST
Last Updated 13 ಅಕ್ಟೋಬರ್ 2020, 11:24 IST
ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಕ್ಕ ಎಂಬುವರ ಮೆಕ್ಕೆಜೋಳದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ಸೋಮವಾರ ರಾತ್ರಿ ವಶಪಡಿಸಿಕೊಂಡರು
ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಕ್ಕ ಎಂಬುವರ ಮೆಕ್ಕೆಜೋಳದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ಸೋಮವಾರ ರಾತ್ರಿ ವಶಪಡಿಸಿಕೊಂಡರು   

ಹೊಳಲ್ಕೆರೆ: ತಾಲ್ಲೂಕಿನ ತಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹನುಮಕ್ಕ ಎಂಬುವರ ಸರ್ವೆ ನಂಬರ್ 287/2ರ ಜಮೀನಿನಲ್ಲಿ ಮೆಕ್ಕೆಜೋಳದ ಮಧ್ಯೆ ಬೆಳೆದಿದ್ದ ₹50,000 ಮೌಲ್ಯದ ಹಸಿ ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.

‘ಸಾರ್ವಜನಿಕರ ಮಾಹಿತಿ ಮೇರೆಗೆ ಜಮೀನಿಗೆ ಭೇಟಿ ನೀಡಿದಾಗ ತೆನೆ, ಹೂ, ಎಲೆ, ಕಾಯಿ ಮತ್ತು ಬೀಜಗಳಿಂದ ಕೂಡಿದ ಒಟ್ಟು 12 ಹಸಿ ಗಾಂಜಾ ಗಿಡಗಳು ಪತ್ತೆ ಆಗಿವೆ. ಗಿಡಗಳನ್ನು ವಶಪಡಿಸಿಕೊಂಡಿದ್ದು, ಜಮೀನಿನಲ್ಲಿದ್ದ ಆರೋಪಿ ಓಬಣ್ಣ ಎಂಬುವರನ್ನು ಬಂಧಿಸಲಾಗಿದೆ. ಅಬಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ’ ಎಂದು ಅಬಕಾರಿ ನಿರೀಕ್ಷಕಿ ಕೆ.ಲತಾ ತಿಳಿಸಿದ್ದಾರೆ.

ದಾಳಿ ಸಮಯದಲ್ಲಿ ಅಬಕಾರಿ ಉಪನಿರೀಕ್ಷಕ ಡಿ.ಬಿ.ಅವಿನಾಶ್, ಅಬಕಾರಿ ರಕ್ಷಕರಾದ ದಾದಾಪೀರ್, ಬಸವರಾಜ್, ಮಧುರಾಯ, ಪ್ರವೀಣ್ ಕುಮಾರ್, ಬಸವರಾಜ್, ತಾಳ್ಯ ಮತ್ತು ಘಟ್ಟಿಹೊಸಳ್ಳಿ ಗ್ರಾಮ ಲೆಕ್ಕಾಧಿಕಾರಿಗಳಾದ ಪ್ರದೀಪ್, ರಂಗನಾಥ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.