ಹಿರಿಯೂರು: ತಾಲ್ಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ನಾಲ್ಕು ಅಂಗನವಾಡಿ ಕಾರ್ಯಕರ್ತೆಯರು ಹಾಗೂ 35 ಮಿನಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳ ಭರ್ತಿಗೆ ಶಿಶು ಅಭಿವೃದ್ಧಿ ಇಲಾಖೆ ಅರ್ಜಿ ಆಹ್ವಾನಿಸಿದೆ.
ಕಾರ್ಯಕರ್ತೆಯರು: ತಾಲ್ಲೂಕಿನ ಬೋರನಕುಂಟೆ, ಐನಹಳ್ಳಿ, ಕಣಜನಹಳ್ಳಿ–1 ಹಾಗೂ ವಿ.ಕೆ. ಗುಡ್ಡ–3 (ಮೀಸಲಾತಿ–ಇತರೆ).
ಮಿನಿ ಕಾರ್ಯಕರ್ತೆಯರು: ಧರ್ಮಪುರದ ಕೆರೆಮುಂದಲಹಟ್ಟಿ, ನಡುವಲಹಟ್ಟಿ, ಕೆ.ಆರ್.ಹಳ್ಳಿ–1, ಗೊರ್ಲಡುಕು, ಖಂಡೇನಹಳ್ಳಿ–3, ಎಣ್ಣೆಗೆರೆ, ರಂಗೇನಹಳ್ಳಿ–1, ಅಂಬಲಗೆರೆ–1, ಕೆ.ಸಿ.ರೊಪ್ಪ, ದಾಸಣ್ಣನಮಾಳಿಗೆ, ಸೊಂಡೇಕೆರೆ–3, ಬಂಡ್ಲಾರಹಟ್ಟಿ, ಪಾಲವ್ವನಹಳ್ಳಿ–2, ಬ್ಯಾಡರಹಳ್ಳಿ–1, ಸೀಗೇಹಟ್ಟಿ, ಸೋಮೇರಹಳ್ಳಿ ಗೊಲ್ಲರಹಟ್ಟಿ, ಕೆರೆಕೋಡಿಹಟ್ಟಿ, ಮುಂಗಸವಳ್ಳಿ, ಹರಿಯಬ್ಬೆ ಕೃಷ್ಣಗಿರಿ, ಶ್ರವಣಗೆರೆ–1, ಹಿರಿಯೂರಿನ ಹರಿಶ್ಚಂದ್ರಘಾಟ್–1, ಹುಳಿಯಾರುರಸ್ತೆ–3, ಗೋಪಾಲಪುರ–1, ಎ.ಕೆ.ಕಾಲೋನಿ–3 ಹಾಗೂ ಮಿರ್ಜಾ ಬಡಾವಣೆ (ಎಲ್ಲವೂ ಇತರೆ).
ಪರಿಶಿಷ್ಟ ಜಾತಿ: ಬೇತೂರು ಮಾರಮ್ಮನಹಳ್ಳಿ, ದಿಂಡಾವರ ಹೊಸೂರು, ಮಾವಿನಮಡು, ಹರ್ತಿಕೋಟೆ–3, ಮರಡಿಹಳ್ಳಿ ಎ.ಕೆ.ಕಾಲೊನಿ, ಪಾಲವ್ವನಹಳ್ಳಿ–3, ಗುಡಿಹಳ್ಳಿ, ಬಬ್ಬೂರು ಫಾರಂ–2 ಹಾಗೂ ಚಳಮಡು ಭೂತನಹಟ್ಟಿ.
ಪರಿಶಿಷ್ಟ ಪಂಗಡ: ಕೆ.ಆರ್.ಪುರ.
ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 30ರಿಂದ ಆ. 30ರ ಸಂಜೆ 5.30ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಶಿಶು ಅಭಿವೃದ್ಧಿ ರಾಘವೇಂದ್ರ ತಿಳಿಸಿದ್ದಾರೆ. (ವೆಬ್‌ಸೈಟ್ ವಿಳಾಸ:www.anganawadirecruit.kar.nic.in)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.