ADVERTISEMENT

ಶತಮಾನೋತ್ಸವದ ಸಂಭ್ರಮದಲ್ಲಿ ಸೇವಾದಳ: ಎಂ.ಆರ್. ಮೂರ್ತಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 13:55 IST
Last Updated 2 ಜುಲೈ 2024, 13:55 IST
ಹೊಸದುರ್ಗದಲ್ಲಿ ಸೇವಾದಳದ ತಾಲ್ಲೂಕು ಸಮಿತಿಯಿಂದ ಆಯೋಜಿಸಿದ್ದ ‘ಶಿಕ್ಷಕರ ಪುನಃಶ್ಚೇತನ ಕಾರ್ಯಾಗಾರ’ದಲ್ಲಿ ನಾ.ಸು. ಹರ್ಡೀಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು
ಹೊಸದುರ್ಗದಲ್ಲಿ ಸೇವಾದಳದ ತಾಲ್ಲೂಕು ಸಮಿತಿಯಿಂದ ಆಯೋಜಿಸಿದ್ದ ‘ಶಿಕ್ಷಕರ ಪುನಃಶ್ಚೇತನ ಕಾರ್ಯಾಗಾರ’ದಲ್ಲಿ ನಾ.ಸು. ಹರ್ಡೀಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು    

ಹೊಸದುರ್ಗ: ‘ಭಾರತ ಸೇವಾದಳ ಶತಮಾನೋತ್ಸವದ ಸಂಭ್ರಮದಲ್ಲಿದೆ. ಪಟ್ಟಣದಲ್ಲಿ ರಾಜ್ಯಮಟ್ಟದ ವಿಭಿನ್ನ ಕಾರ್ಯಕ್ರಮ ಮಾಡುವ ಮೂಲಕ ಜನರಲ್ಲಿ ಸೇವಾ ಮನೋಭಾವ ಮೂಡಿಸಬೇಕು’ ಎಂದು ಭಾರತ ಸೇವಾದಳದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್.ಮೂರ್ತಿ ಸಲಹೆ ನೀಡಿದರು.

ಭಾರತ ಸೇವಾದಳದ ಹೊಸದುರ್ಗ ತಾಲ್ಲೂಕು ಸಮಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ವತಿಯಿಂದ ಪಟ್ಟಣದ ಕ್ರೀಡಾಂಗಣ ಕಚೇರಿಯಲ್ಲಿ ಆಯೋಜಿಸಿದ್ದ ‘ಶಿಕ್ಷಕರ ಪುನಃಶ್ಚೇತನ ಕಾರ್ಯಾಗಾರ’ದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಈ ಕಾರ್ಯ ಮೊದಲು ಮಕ್ಕಳಿಂದ ಆಗಬೇಕು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಹಾಗಾಗಿ ಮಕ್ಕಳಿಗೆ ಸೇವಾ ಮನೋಭಾವ ಬೆಳೆಸುವುದು ಪೋಷಕರು ಹಾಗೂ ಶಿಕ್ಷಕರ ಕರ್ತವ್ಯ. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ’ ಎಂದು ತಾಲ್ಲೂಕು ಘಟಕದ ಉಪಾಧ್ಯಕ್ಷ ಆಗ್ರೋ ಶಿವಣ್ಣ ಸಲಹೆ ನೀಡಿದರು.

ADVERTISEMENT

ಜಿಲ್ಲಾ ಸಂಘಟಕ ಎಂ.ಅಣ್ಣಯ್ಯ, ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸ್, ತಾಲ್ಲೂಕು ಅಧಿನಾಯಕ ಮಹಾಂತೇಶ್, ಖಜಾಂಚಿ ಬಸವರಾಜ್, ರಾಜಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ್, ರಾಜ್ಯ ಸಂಪನ್ಮೂಲ ಶಿಕ್ಷಕ ಟಿ.ಎಸ್. ಕುಮಾರಸ್ವಾಮಿ ಸೇರಿ ಭಾರತ್ ಸೇವಾದಳದ ತರಬೇತಿ ಪಡೆದ ಶಿಕ್ಷಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.