ADVERTISEMENT

ಹಿರಿಯೂರು: ಕುರಿಮರಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಮೇ 2022, 7:55 IST
Last Updated 3 ಮೇ 2022, 7:55 IST
ಒಂದು ವರ್ಷದ ಕುರಿಮರಿಗೆ  ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ
ಒಂದು ವರ್ಷದ ಕುರಿಮರಿಗೆ  ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ   

ಹಿರಿಯೂರು (ಚಿತ್ರದುರ್ಗ): ಮನುಷ್ಯರು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ, ಒಂದು ವರ್ಷದ ಕುರಿಮರಿಗೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಲಾಗಿದೆ.

ಹಿರಿಯೂರು ತಾಲ್ಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿ ಗ್ರಾಮದ ಕಿಟ್ಟಪ್ಪ ಎಂಬ ಕುರಿಗಾಯಿ ಅಂತಹ ಪ್ರೀತಿ ತೋರಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕಿಟ್ಟಪ್ಪ ಎರಡು ಕುರಿಮರಿ ಸಾಕಿದ್ದು, ಇದರಲ್ಲಿ ಒಂದು ಮರಿಗೆ ಒಂದು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಐದು ಕೆ.ಜಿ ಕೇಕ್ ಅನ್ನು ಮನೆಗೆ ತಂದು ಕತ್ತರಿಸಿ ಕುರಿಗೆ ತಿನ್ನಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ.

ADVERTISEMENT

ಹುಟ್ಟುಹಬ್ಬದಲ್ಲಿ ಅಕ್ಕಪಕ್ಕದ ಮನೆಯವರು ಸಹ ಭಾಗಿಯಾಗಿ ಕುರಿಗೆ ಶುಭ ಹಾರೈಸಿ, ತಮ್ಮ ಕೈಲಾದಷ್ಟು ಹಣವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಬಂದಿದ್ದವರಿಗೆ ಕೇಕ್, ಕಾರ ವಿತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.