ಹಿರಿಯೂರು: ಕುವೆಂಪು ವಿವಿ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳಲ್ಲಿ (ದಾವಣಗೆರೆ ವಿವಿ ಆರಂಭದ ಮೊದಲು) ಸ್ನಾತಕ ಪದವಿಗಳಿಗೆ 2003–04ರಲ್ಲಿ ಪ್ರವೇಶ ಪಡೆದು ಸೆಮಿಸ್ಟರ್ ಸ್ಕೀಂನಲ್ಲಿ ವ್ಯಾಸಂಗ ಮಾಡಿ ನಿಗದಿತ ಅವಧಿಯಲ್ಲಿ ಪದವಿ ಪೂರ್ಣಗೊಳಿಸಲು ಆಗದವರಿಗೆ ಮತ್ತೊಂದು ಅವಕಾಶ ಕಲ್ಪಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಹೇಶ್ ಮನವಿ ಮಾಡಿದ್ದಾರೆ.
ಕೆಲ ವಿಷಯಗಳಲ್ಲಿ ಅನುತ್ತೀರ್ಣರಾಗಿರುವವರಿಗೆ 2024 ನವಂಬರ್ 25ರಿಂದ (ಆಯಾ ವರ್ಷದಲ್ಲಿ ಚಾಲ್ತಿಯಲ್ಲಿರುವ ಪಠ್ಯಕ್ರಮ ಅನ್ವಯವಾಗುವಂತೆ) ವಿಶೇಷ ಸಂದರ್ಭವೆಂದು ಪರಿಗಣಿಸಿ ನಿಗದಿತ ಪರೀಕ್ಷಾ ಶುಲ್ಕದೊಂದಿಗೆ ಹೆಚ್ಚುವರಿ ₹ 3,000 ವಿಶೇಷ ಶುಲ್ಕದೊಂದಿಗೆ ಪರೀಕ್ಷೆ ಬರೆಯಲು ಅಂತಿಮ ಅವಕಾಶ ನೀಡಲಾಗಿದೆ. ಶುಲ್ಕ ಪಾವತಿಸಿದ ನಂತರ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರ ಮೂಲಕ ಕುಲಸಚಿವರು (ಪರೀಕ್ಷಾಂಗ) ಇವರಿಗೆ ವಿವರ ಸಲ್ಲಿಸಬೇಕು. ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ 2003–04ರ ನಂತರ ಪ್ರವೇಶ ಪಡೆದ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಅರ್ಜಿ ಸಲ್ಲಿಸಲು ನ. 8 ರವರೆಗೆ ಕಾಲಾವಕಾಶವಿದ್ದು, ಪ್ರತಿ ಸೆಮಿಸ್ಟರ್‌ಗೆ ₹ 100 ವಿಳಂಬ ಶುಲ್ಕದೊಂದಿಗೆ ನ. 9 ಮತ್ತು 10ರಂದು, ₹ 500 ವಿಳಂಬ ಶುಲ್ಕದೊಂದಿಗೆ ನ. 11 ಮತ್ತು 12ರಂದು ಶುಲ್ಕ ಪಾವತಿಸಬಹುದು ಎಂದು ಮಹೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.