ADVERTISEMENT

ವಾರ್ಡನ್‌ಗೆ ಥಳಿಸಲು ಕಾಂಗ್ರೆಸ್ ಶಾಸಕ KC ವೀರೇಂದ್ರ ವಿದ್ಯಾರ್ಥಿಗಳಿಗೆ ಪ್ರಚೋದನೆ

ಚಿತ್ರದುರ್ಗ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಕಾನೂನು ಮತ್ತು ಬಿ.ಇಡಿ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಪ್ರಚೋದನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 10:59 IST
Last Updated 5 ಆಗಸ್ಟ್ 2023, 10:59 IST
ಘಟನಾ ಸಂದರ್ಭ
ಘಟನಾ ಸಂದರ್ಭ   

ಚಿತ್ರದುರ್ಗ: ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಅಹವಾಲು ಆಲಿಸಿದ ಶಾಸಕ ಕೆ.ಸಿ.ವೀರೇಂದ್ರ, ‘ಕೊಠಡಿಯಲ್ಲಿ ಕೂಡಿಹಾಕಿ ವಾರ್ಡ್‌ನ್‌ಗೆ ಬಾರಿಸಿ’ ಎಂದು ಪ್ರಚೋದನೆ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಚಿತ್ರದುರ್ಗ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಕಾನೂನು ಮತ್ತು ಬಿ.ಇಡಿ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಭೇಟಿ ನೀಡಿದ್ದ ಶಾಸಕ, ವಾರ್ಡನ್‌ ವಿರುದ್ಧ ಅಸಮಾಧಾನ ಹೊರಹಾಕುವ ವೇಳೆ ಹೀಗೆ ಮಾತನಾಡಿದ್ದಾರೆ. ಕೊಳೆತ ತರಕಾರಿ ಬಳಸಿ ಮಾಡಿದ ಅಡುಗೆಯಲ್ಲಿ ಹುಳುಗಳಿರುತ್ತವೆ ಎಂದು ವಿದ್ಯಾರ್ಥಿಗಳು ಆ.3ರಂದು ಪ್ರತಿಭಟನೆ ನಡೆಸಿದ್ದರು.

‘ಇನ್ನೊಮ್ಮೆ ಊಟದಲ್ಲಿ ಹುಳುಗಳು ಸಿಕ್ಕರೆ ಆರಿಸಿ ಒಂದು ತಟ್ಟೆಗೆ ಹಾಕಿಕೊಂಡು ವಾರ್ಡನ್‌ಗೆ ತಿನ್ನಿಸಿ. ಕೊಠಡಿಯೊಂದರಲ್ಲಿ ಕೂಡಿಹಾಕಿ ಸರಿಯಾಗಿ ಬಾರಿಸಿ. ಯೋಚನೆಯೇ ಮಾಡಬೇಡಿ ನಾನಿದ್ದೇನೆ. ಇದು ಯಾಕೊ ಅತಿಯಾಗಿದೆ. ವಾರ್ಡನ್‌ಗೆ ಬಾರಿಸಿದರೆ ಮಾತ್ರ ಪರಿಸ್ಥಿತಿ ಸರಿಹೋಗುತ್ತದೆ. ಇಲ್ಲವಾದರೆ ಇವರಿಗೆ ಅರಿವಾಗುವುದಿಲ್ಲ’ ಎಂದು ಹೇಳಿದ್ದು ವಿಡಿಯೊದಲ್ಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.