ADVERTISEMENT

ಚಿತ್ರದುರ್ಗ: ಮಹಾಂತೇಶ್ ಗಜೇಂದ್ರಗಡಗೆ ‘ಶ್ರೀ ಶಿವಕುಮಾರ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 23:10 IST
Last Updated 18 ಅಕ್ಟೋಬರ್ 2024, 23:10 IST
ಮಹಾಂತೇಶ್‌ ಎಂ.ಗಜೇಂದ್ರಗಡ
ಮಹಾಂತೇಶ್‌ ಎಂ.ಗಜೇಂದ್ರಗಡ   

ಚಿತ್ರದುರ್ಗ: ರಂಗಭೂಮಿ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡಿದವರಿಗೆ ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾಸಂಘ ಕೊಡಮಾಡುವ ‘ಶ್ರೀ ಶಿವಕುಮಾರ ಪ್ರಶಸ್ತಿ’ಗೆ ಇಳಕಲ್ಲಿನ ಹಿರಿಯ ರಂಗಕರ್ಮಿ ಮಹಾಂತೇಶ್ ಎಂ. ಗಜೇಂದ್ರಗಡ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ₹ 50,000 ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಸಾಣೇಹಳ್ಳಿಯಲ್ಲಿ ನವೆಂಬರ್‌ 4ರಿಂದ 9ರವರೆಗೆ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT