ADVERTISEMENT

ಚಿತ್ರದುರ್ಗ: ಮುರುಘಾ ಸ್ವಾಮೀಜಿ ಬೆಳ್ಳಿ ಪುತ್ಥಳಿ ಪತ್ತೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 15:18 IST
Last Updated 15 ಜುಲೈ 2024, 15:18 IST
<div class="paragraphs"><p>ಮುರುಘಾ ಮಠದ ಶಿವಮೂರ್ತಿ ಶರಣ</p></div>

ಮುರುಘಾ ಮಠದ ಶಿವಮೂರ್ತಿ ಶರಣ

   

ಚಿತ್ರದುರ್ಗ: ನಗರದ ಮುರುಘಾ ಮಠದ ದರ್ಬಾರ್‌ ಹಾಲ್‌ನಿಂದ ಕಳ್ಳತನವಾಗಿದ್ದ 22 ಕೆ.ಜಿ. ತೂಕದ ಶಿವಮೂರ್ತಿ ಮುರುಘಾ ಸ್ವಾಮೀಜಿಯವರ ಬೆಳ್ಳಿ ಪುತ್ಥಳಿ ಸೋಮವಾರ ಬೆಳಿಗ್ಗೆ ಮಠದ ಆವರಣದ ಕಾಲುವೆ ಬಳಿ ಗೋಣಿ ಚೀಲದಲ್ಲಿ ಪತ್ತೆಯಾಗಿದೆ.

ಪುತ್ಥಳಿ ಕಳ್ಳತನವಾಗಿರುವ ಬಗ್ಗೆ ಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಜುಲೈ 11ರಂದು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕಳವು ಮಾಡಿದ್ದವರು ಭಯದಿಂದ ಪುತ್ಥಳಿಯಲ್ಲಿ ಮಠದ ಆವರಣದಲ್ಲಿ ಇರಿಸಿ ಹೋಗಿರಬಹುದು ಎಂದು ಶಂಕಿಸಲಾಗಿದೆ.

ADVERTISEMENT

ಸ್ಥಳಕ್ಕೆ ಬಂದ ಪೊಲೀಸರು ಪುತ್ಥಳಿ ಪರಿಶೀಲಿಸಿದರು. ಬೆರಳಚ್ಚು, ಶ್ವಾನ ದಳ ತಜ್ಞರು ಮಾಹಿತಿ ಪಡೆದರು. 21 ಇಂಚು ಎತ್ತರದ ಪುತ್ಥಳಿಯು ₹ 16 ಲಕ್ಷ ಮೌಲ್ಯ ಹೊಂದಿದೆ. ಶಿವಮೂರ್ತಿ ಮುರುಘಾ ಸ್ವಾಮೀಜಿ ಪೀಠಾರೋಹಣದ ರಜತೋತ್ಸವ ಆಚರಣೆ ಸಂದರ್ಭದಲ್ಲಿ ವಿವಿಧ ಮಠಾಧೀಶರು ಪುತ್ಥಳಿ ಅರ್ಪಿಸಿದ್ದರು.

‘ಪುತ್ಥಳಿ ಕದ್ದವರು ಯಾರು, ಮರಳಿ ತಂದು ಹಾಕಿದವರು ಯಾರು ಎಂಬ ಬಗ್ಗೆ ಗೊತ್ತಾಗಬೇಕು. ಕಳ್ಳರು ಬುದ್ಧಿವಂತರಾಗಿದ್ದು ಕಳ್ಳತನಕ್ಕೂ ಮೊದಲು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಸ್ಥಗಿತಗೊಳಿಸಿದ್ದಾರೆ. ನನ್ನ ವಿರುದ್ಧವೂ ಕಳ್ಳತನ ಷಡ್ಯಂತ್ರ ನಡೆದಿತ್ತು. ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕು’ ಎಂದು ಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.