ADVERTISEMENT

ಚಿತ್ರದುರ್ಗ: ಸಿರಿಗೆರೆ ಶ್ರೀ ಬೆಂಬಲಿಸಿ ಸಾವಿರಾರು ಭಕ್ತರ ಜಾಥಾ

ಹಿರಿಯ ಗುರುವನ್ನು ಕೊಂದ ಸಂಚು ಮುಂದುವರಿಕೆ; ಸ್ವಾಮೀಜಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 20:05 IST
Last Updated 2 ಸೆಪ್ಟೆಂಬರ್ 2024, 20:05 IST
ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ  ಬೆಂಬಲಿಸಿ 36 ಹಳ್ಳಿಗಳ ಸಾವಿರಾರು ಭಕ್ತರು ಬೆನ್ನೂರು ಸರ್ಕಲ್‌ನಿಂದ ಸಿರಿಗೆರೆಯವರೆಗೂ ಪಾದಯಾತ್ರೆ ನಡೆಸಿದರು
ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ  ಬೆಂಬಲಿಸಿ 36 ಹಳ್ಳಿಗಳ ಸಾವಿರಾರು ಭಕ್ತರು ಬೆನ್ನೂರು ಸರ್ಕಲ್‌ನಿಂದ ಸಿರಿಗೆರೆಯವರೆಗೂ ಪಾದಯಾತ್ರೆ ನಡೆಸಿದರು   

ಸಿರಿಗೆರೆ (ಚಿತ್ರದುರ್ಗ): ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯನ್ನು ಬೆಂಬಲಿಸಿ ತಾಲ್ಲೂಕಿನ ಭರಮಸಾಗರ ಹೋಬಳಿ ವ್ಯಾಪ್ತಿಯ 36 ಹಳ್ಳಿಗಳ ಸಾವಿರಾರು ಭಕ್ತರು ಇಲ್ಲಿನ ಬೆನ್ನೂರು ಸರ್ಕಲ್‌ನಿಂದ ಸಿರಿಗೆರೆಯವರೆಗೂ 6 ಕಿ.ಮೀ. ಪಾದಯಾತ್ರೆ ಹಾಗೂ ಬೈಕ್‌ ಜಾಥಾ ನಡೆಸಿದರು.

ಬೆನ್ನೂರು ಸರ್ಕಲ್‌ನಲ್ಲಿ ಸೇರಿದ್ದ ಭಕ್ತರು, ಶ್ರೀಗಳ ವಿರುದ್ಧ ದಾವಣಗೆರೆಯಲ್ಲಿ ಭಾನುವಾರ ಸಭೆ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡ ಬಿ.ಸಿ.ಪಾಟೀಲ್‌, ಉದ್ಯಮಿ ಅಣಬೇರು ರಾಜಣ್ಣ ವಿರುದ್ಧ ಘೋಷಣೆ ಕೂಗಿದರು.

ಶ್ರೀಗಳ ಪರ ಘೋಷಣೆ ಕೂಗುತ್ತಾ ಕಾಲ್ನಡಿಗೆ, ಬೈಕ್‌ ಜಾಥಾ ಮೂಲಕ ಮಠದ ಆವರಣ ತಲುಪಿದರು. ಸದ್ಧರ್ಮ ನ್ಯಾಯಪೀಠದಲ್ಲಿದ್ದ ಶ್ರೀಗಳನ್ನು ಭೇಟಿಯಾಗಿ ಅವರನ್ನು ಬೆಂಬಲಿಸಿದ ಘೋಷಣಾ ಪತ್ರಗಳನ್ನು ಸಮರ್ಪಿಸಿದರು.

ADVERTISEMENT

ಸ್ವಾಮೀಜಿ ಸವಾಲು:

‘₹ 2,000 ಕೋಟಿ ಬೆಲೆಯ ಮಠದ ಆಸ್ತಿಯನ್ನು ನಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದೇವೆ ಎಂದು ಆಪಾದಿಸುವವರು ಅದನ್ನು ಭಕ್ತರ ಮುಂದೆ ಸಾಬೀತುಪಡಿಸಲಿ’ ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸವಾಲು ಹಾಕಿದರು.

‘ಮಠದ ಆಸ್ತಿ ಹಿರಿಯ ಗುರುಗಳ ಹೆಸರಿನಲ್ಲಿದೆ. ಇವೆಲ್ಲವೂ ಮಠದ ಆಸ್ತಿಗಳೇ ಆಗಿದ್ದು, ಟ್ರಸ್ಟ್‌ ಡೀಡ್‌ನಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಹೀಗಿದ್ದೂ ಮಿಥ್ಯಾರೋಪ ಮಾಡಲಾಗುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ಮಠದ ಹಿಂದಿನ ಕಾರ್ಯದರ್ಶಿಯ ಹೆಸರಿನಲ್ಲಿ ಉತ್ತಂಗಿ, ಮೈಸೂರು, ಸಿರಿಗೆರೆ, ಬೆನ್ನೂರು ಸರ್ಕಲ್‌ನಲ್ಲಿ ಆಸ್ತಿಗಳಿವೆ. ಅವರಿಗೆ ಮಠದ ಬಗ್ಗೆ ಕಾಳಜಿ ಇದ್ದರೆ ಆ ಆಸ್ತಿಗಳನ್ನು ಮಠಕ್ಕೆ ವರ್ಗಾಯಿಸಿಕೊಡುವ ಕೆಲಸ ಮಾಡಲಿ. ರಾಷ್ಟ್ರೀಯ ಹೆದ್ದಾರಿಗೆ ಸ್ವಾಧೀನವಾದ ಜಮೀನಿಗೆ ಬಂದ ₹ 40 ಲಕ್ಷ ಪರಿಹಾರದ ಹಣ ಹಿಂದಿನ ಕಾರ್ಯದರ್ಶಿಯಿಂದ ಬರಬೇಕಾಗಿದೆ. ವಿನಾಕಾರಣ ದೂಷಿಸುವ ಜನರು ಈ ಆಸ್ತಿಗಳು ಮಠಕ್ಕೆ ಸೇರುವಂತೆ ಮಾಡಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.