ಧರ್ಮಪುರ: ಕಳಪೆ ಹತ್ತಿ ಬೀಜ ಪೂರೈಕೆಯಿಂದ ನಷ್ಟಕ್ಕೀಡಾಗಿರುವ ರೈತರ ಜಮೀನುಗಳಿಗೆ ಕೃಷಿ ಅಧಿಕಾರಿಗಳು ಮತ್ತು ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚಿನ ಪರೀಕ್ಷೆಗೆ ಕೊಂಡೊಯ್ದರು.
‘ಕಳಪೆ ಹತ್ತಿ ಬೀಜ: ಕಾಯಿ ಕಟ್ಟದ ಗಿಡ’ ಶೀರ್ಷೆಕೆಯಡಿ ‘ಪ್ರಜಾವಾಣಿ’ಯಲ್ಲಿ ಸೋಮವಾರ ವರದಿ ಪ್ರಕಟವಾಗಿತ್ತು.
ಏಪ್ರಿಲ್ ತಿಂಗಳಿನಲ್ಲಿ ಬಿತ್ತನೆಯಾಗಿರುವ ಹತ್ತಿಗೆ ಹೂ ಕಟ್ಟದಿರುವ ಸಮಸ್ಯೆ ಇಲ್ಲ ಎಂದು ಕೀಟ ವಿಜ್ಞಾನಿ ಡಾ.ಎಲ್.ಹನುಮಂತರಾಯ ಹೇಳಿದ್ದಾರೆ. ‘ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಹತ್ತಿ ಬಿತ್ತನೆಯಾಗಿದೆ. ಮಾರ್ಚ್‌ನಲ್ಲಿ ಬಿತ್ತನೆಯಾಗಿರುವ ಹತ್ತಿ ಬೆಳೆಗೆ ಮಾತ್ರ ಹೂವು ಉದುರುವುದು ಮತ್ತು ಕಾಯಿ ಕಟ್ಟದೇ ಇರುವ ಸಮಸ್ಯೆ ಕಂಡುಬಂದಿದೆ. ಆದರೆ, ಏಪ್ರಿಲ್ ತಿಂಗಳಿನಲ್ಲಿ ಬಿತ್ತನೆಯಾಗಿರುವ ಹತ್ತಿಗೆ ಈ ಸಮಸ್ಯೆ ಇಲ್ಲ. ಹಿರಿಯೂರು ತಾಲ್ಲೂಕಿನ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗುವುದು‘ ಎಂದು ಹೇಳಿದ್ದಾರೆ.
ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಕುಮಾರನಾಯ್ಕ್, ಡಾ.ನಂದಿನಿ, ಕೃಷಿ ಉಪ ನಿರ್ದೇಶಕ ಡಾ.ಶಿವಕುಮಾರ್, ಸಹಾಯಕ ಕೃಷಿ ನಿರ್ದೇಶಕಿ ಡಾ.ಉಲ್ಪತ್ ಜೈಬಾ, ಕೃಷಿ ಅಧಿಕಾರಿ ಕಿರಣ್ ಕುಮಾರ್, ಗೋಪಾಲನಾಯ್ಕ್, ಶ್ರೀಮೂರ್ತಿ, ರೈತ ಬಸವರಾಜ, ಕಾಂತರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.