ADVERTISEMENT

ಕಾತ್ರಾಳು ಕೆರೆಗೆ ರೋಗಗ್ರಸ್ತ ಕೋಳಿ ಎಸೆದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 16:35 IST
Last Updated 4 ಮಾರ್ಚ್ 2024, 16:35 IST
ರೋಗದಿಂದ ಸಾವನ್ನಪ್ಪಿರುವ ಕೋಳಿಗಳನ್ನು ಕಾತ್ರಾಳು ಕೆರೆಯಲ್ಲಿ ಎಸೆದಿರುವುದು
ರೋಗದಿಂದ ಸಾವನ್ನಪ್ಪಿರುವ ಕೋಳಿಗಳನ್ನು ಕಾತ್ರಾಳು ಕೆರೆಯಲ್ಲಿ ಎಸೆದಿರುವುದು   

ಸಿರಿಗೆರೆ: ಭರಮಸಾಗರ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಬರುವ ಕಾತ್ರಾಳು ಕೆರೆಗೆ ಭಾನುವಾರ ರಾತ್ರಿ ದುಷ್ಕರ್ಮಿಗಳು ರೋಗದಿಂದ ಸತ್ತಿರುವ ನೂರಾರು ಕೋಳಿಗಳನ್ನು ಎಸೆದಿದ್ದಾರೆ.

ಸೋಮವಾರ ಬೆಳಿಗ್ಗೆ ಸುತ್ತಲಿನ ಗ್ರಾಮಸ್ಥರು ಕೆರೆಯಲ್ಲಿನ ಕೋಳಿಗಳನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದರು.

ಕೆರೆಯ ಬಳಿ ಬಂದ ಕಾತ್ರಾಳು, ಬಳ್ಳೇಕಟ್ಟೆ, ಸಾದರಹಳ್ಳಿ, ಬೀರಾವರ ಗ್ರಾಮಸ್ಥರು, ‘ಕೋಳಿಗಳು ರೋಗಕ್ಕೆ ತುತ್ತಾಗಿ ಸತ್ತಿವೆ. ಅವುಗಳನ್ನು ಸಮರ್ಪಕ ವಿಲೇವಾರಿ ಮಾಡದೇ ಕೆರೆಗೆ ಎಸೆದಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಬರದಿಂದ ನೀರಿನ ಸಮಸ್ಯೆ ಹೆಚ್ಚಿರುವ ಈ ಸಂದರ್ಭದಲ್ಲಿ ಕೆರೆಗೆ ಸತ್ತ ಕೋಳಿ ಎಸೆದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೋಗದಿಂದ ಸಾವನ್ನಪ್ಪಿರುವ ಕೋಳಿಗಳನ್ನು ಕಾತ್ರಾಳು ಕೆರೆಯಲ್ಲಿ ಎಸೆಯಲಾಗಿರುವ ದೃಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.