ಹಿರಿಯೂರು: ಸಾರ್ವಜನಿಕ ಬಳಕೆಯ ನೀರಿನ ಟ್ಯಾಂಕರ್ ಜಾಗ ಒತ್ತುವರಿ ಮಾಡಿ ನಿರ್ಮಿಸಿರುವ ಕಾಂಪೌಂಡ್ ತೆರವುಗೊಳಿಸುವಂತೆ ಒತ್ತಾಯಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ವೀರವ್ವ ನಾಗತಿಹಳ್ಳಿಯಲ್ಲಿ ನೀರಗಂಟಿ ಕೆಲಸ ಮಾಡುತ್ತಿರುವ ಎಲ್. ದೇವರಾಜ್ ಎಂಬವರು ತಮ್ಮ ಪ್ರಭಾವ ಬಳಸಿ ಟ್ಯಾಂಕ್ ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಿಸಿದ್ದಾರೆ. ಸಾರ್ವಜನಿಕರಿಗೆ ಸೇರಿದ ಈ ಆಸ್ತಿಯನ್ನು ಇ–ಸ್ವತ್ತು ಮಾಡಿಕೊಡಲಾಗಿದೆ. ಇ–ಸ್ವತ್ತು ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕ ಆಸ್ತಿಯನ್ನು ತನ್ನ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ನೀರಗಂಟಿಯನ್ನು ಕೂಡಲೇ ಕೆಲಸದಿಂದ ಅಮಾನತು ಮಾಡಬೇಕು’ ಎಂದು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ರಾಘವೇಂದ್ರ ಆಗ್ರಹಿಸಿದರು.
ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಮನವಿ ಸಲ್ಲಿಸಲಾಯಿತು.
ಸೇನೆಯ ಉಪಾಧ್ಯಕ್ಷ ಕಣುಮೇಶ್, ಸನಾವುಲ್ಲ, ಲಕ್ಷ್ಮಣರಾವ್, ಗಿರೀಶ್, ದಿಂಡಾವರ ಗ್ರಾಮ ಪಂಚಾಯತಿ ಸದಸ್ಯ ಪರಮೇಶ್ವರಪ್ಪ, ಕೆ.ನೀಲಕಂಠಪ್ಪ, ವೆಂಕಟರಾಮ್, ಕರಿಯಪ್ಪ, ವಿರುಪಾಕ್ಷ, ರಂಗನಾಥ, ಅಭಿಷೇಕ್, ತಿಪ್ಪೇಸ್ವಾಮಿ, ಶಶಿಕುಮಾರ್, ಗಿರೀಶ್, ಶಿವಣ್ಣ, ಮಂಜುನಾಥ್, ರಾಮಕೃಷ್ಣ, ಅಂಜನಮೂರ್ತಿ, ಜಗದೀಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.