ADVERTISEMENT

ಮರುಬಳಕೆ ಉಡಾವಣೆ ವಾಹನ ‘ಪುಷ್ಪಕ್’ ಲ್ಯಾಂಡಿಂಗ್‌ನ ಅಂತಿಮ ಪ್ರಯೋಗ ಯಶಸ್ವಿ: ಇಸ್ರೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜೂನ್ 2024, 6:30 IST
Last Updated 23 ಜೂನ್ 2024, 6:30 IST
<div class="paragraphs"><p>‘ಪುಷ್ಪಕ್</p></div>

‘ಪುಷ್ಪಕ್

   

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಭಾನುವಾರ ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್) ನಿಂದ ‘ಪುಷ್ಪಕ್’ ಎಂಬ ಹೆಸರಿನ ಮರುಬಳಕೆ ಉಡಾವಣಾ ವಾಹನದ (ಆರ್‌ಎಲ್‌ವಿ) ಲ್ಯಾಂಡಿಂಗ್‌ ಪ್ರಯೋಗವನ್ನು ಯಶಸ್ವಿಗೊಳಿಸಿದೆ.

ಇದು 3ನೇ ಮತ್ತು ಕೊನೆಯ ಪ್ರಾಯೋಗಿಕ ಉಡಾವಣೆ ಎಂದು ಇಸ್ರೊ ಪ್ರಕಟಣೆಯಲ್ಲಿ ತಿಳಿಸಿದೆ. 

ADVERTISEMENT

ಚಳ್ಳಕೆರೆ ತಾಲೂಕಿನ ಕುದಾಪುರ ಗ್ರಾಮದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್) ಆವರಣದ ರನ್‌ವೇನಲ್ಲಿ ಬೆಳಗ್ಗೆ 7.10ಕ್ಕೆ  ಪ್ರಯೋಗ ನಡೆಸಿದ್ದು, ಲ್ಯಾಂಡಿಂಗ್‌ ಯಶಸ್ವಿಯಾಗಿರುವುದಾಗಿ ಇಸ್ರೊ ಮಾಹಿತಿ ಹಂಚಿಕೊಂಡಿದೆ

ರಾಕೆಟ್‌ ಉಡಾವಣೆ ಮಾಡಿದ ಬಳಿಕ ಸುಮಾರು 4.5 ಕಿಲೋಮೀಟರ್‌ ಎತ್ತರದಲ್ಲಿ ಹಾರಾಟ ನಡೆಸಿದ ರಾಕೆಟ್‌, ಸುರಕ್ಷಿತವಾಗಿ ಲ್ಯಾಂಡ್‌ ಆಯಿತು. ಇದರೊಂದಿಗೆ ಮರುಬಳಕೆ ಮಾಡಬಹುದಾದ ರಾಕೆಟ್‌ ತಂತ್ರಜ್ಞಾನದಲ್ಲಿ ಇಸ್ರೊ ಮಹತ್ವದ ಮುನ್ನಡೆ ಸಾಧಿಸಿದೆ. ಅಲ್ಲದೆ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶವನ್ನು ಪ್ರವೇಶಿಸುವ ಯತ್ನವಿದು ಎಂದು ಇಸ್ರೊ ಹೇಳಿದೆ.

ಯಶಸ್ಸಿನ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡ ಬಾಹ್ಯಾಕಾಶ ಸಂಸ್ಥೆ, ‘ಇಸ್ರೊ ಮತ್ತೊಂದು ಮೈಲಿಗಲ್ಲು ಸಾಧಿಸಿದೆ, 3ನೇ ಮತ್ತು ಅಂತಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಪುಷ್ಪಕ್‌ ತನ್ನ ನಿಖರವಾದ ಸ್ಥಾನದಲ್ಲಿ ಲ್ಯಾಂಡ್‌ ಆಗಿದೆ’ ಎಂದು ಬರೆದುಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.