ADVERTISEMENT

ಭೋವಿ ನಿಗಮದ ಹಗರಣ: ಮತ್ತೊಂದು ಆಡಿಯೊ ಬಿಡುಗಡೆಗೊಳಿಸಿದ ಗೂಳಿಹಟ್ಟಿ ಶೇಖರ್

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 16:24 IST
Last Updated 8 ಆಗಸ್ಟ್ 2024, 16:24 IST
ಗೂಳಿಹಟ್ಟಿ ಡಿ ಶೇಖರ್
ಗೂಳಿಹಟ್ಟಿ ಡಿ ಶೇಖರ್   

ಹೊಸದುರ್ಗ: ಭೋವಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳನ್ನು ಸಿಐಡಿ ಎದುರೇ ಬಹಿರಂಗಪಡಿಸಲಾಗುವುದು ಎಂದು ಮಾಜಿ ಸಚಿವ ಗೂಳಿಹಟ್ಟಿ ಡಿ. ಶೇಖರ್ ಅವರು ತಿಳಿಸಿರುವ ಆಡಿಯೊ  ಗುರುವಾರ ಸಾಮಾಜಿಕ ಜಾಲತಾಣಗಳ ಹರಿದಾಡಿದೆ.

ವಿಧಾನ ಪರಿಷತ್ ಸದಸ್ಯ ಸುನಿಲ್ ವಲ್ಲ್ಯಾಪುರೆ, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಹಾಗೂ ಭೂವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸೇರಿ ಎಲ್ಲರೂ ಸಿಐಡಿ ಎದುರು ಹಾಜರಾಗಿ ಎಲ್ಲೇ ನಮ್ಮ ವಿಚಾರಗಳನ್ನು ಬಹಿರಂಗಪಡಿಸುತ್ತೇವೆ ಎಂದಿದ್ದಾರೆ.

ಭೋವಿ ಅಭಿವೃದ್ಧಿ ನಿಗಮದ ₹ 198 ಕೋಟಿಗೂ ಅಧಿಕ ಹಣ ಲೂಟಿ ಮಾಡಲಾಗಿದೆ. ಅದು ಸಮುದಾಯದವರ ಹಣ. ಎಲ್ಲರೂ ಸೇರಿ ವಸೂಲಿ ಮಾಡಬೇಕಿದೆ. ನಾನು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ. ನಾನು ನಿಗಮಕ್ಕೆ ಹೋದಾಗ ಒಂದೂ ಕಡತಗಳಿರಲಿಲ್ಲ‌. ಇದಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಆಗಿರುವ ಖಾತೆ ಪರಿಶೀಲಿಸಿದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಕಡತಗಳಿಲ್ಲದಿದ್ದರೂ ಲೆಕ್ಕ ಸಿಗುತ್ತದೆ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.