ADVERTISEMENT

ಮೊಳಕಾಲ್ಮುರು: ಗುರು ಪೂರ್ಣಿಮೆ ಸಡಗರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 15:43 IST
Last Updated 21 ಜುಲೈ 2024, 15:43 IST
ಮೊಳಕಾಲ್ಮುರಿನ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ಗುರುಪೂರ್ಣಿಮೆ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು
ಮೊಳಕಾಲ್ಮುರಿನ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ಗುರುಪೂರ್ಣಿಮೆ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು   

ಮೊಳಕಾಲ್ಮುರು: ಗುರುಪೂರ್ಣಿಮೆ ಅಂಗವಾಗಿ ಪಟ್ಟಣದ ಕೋನಸಾಗರ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ರಾಂಪುರ ರುದ್ರಾಕ್ಷಿ ಮಠದ ‌ವೀರಭದ್ರಯ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮ ನಡೆದವು. ಬೆಳಿಗ್ಗೆ 5.45ಕ್ಕೆ ಶ್ರೇಯಾ ಆರತಿ, ನಂತರ ಭಕ್ತರಿಂದ ಸಾಯಿಬಾಬಾ ಮಂದಿರಕ್ಕೆ ಕ್ಷೀರಾಭಿಷೇಕ, ಸಾಯಿ ಸತ್ಯವ್ರತ ನಂತರ ಶಿವ ಸಹಸ್ರನಾಮ ಪಠಣೆ, 108 ವಿವಿಧ ಬಗೆಯ ನೈವೇದ್ಯಗಳ ಜತೆಯಲ್ಲಿ ಸ್ವಾಮಿಗೆ ಮಧ್ಯಾಹ್ನದ ಆರತಿ ಮಾಡಲಾಯಿತು. ನಂತರ ಆರ್ಶೀವಚನ, ಅನ್ನಸಂತರ್ಪಣೆ ನಡೆಯಿತು.

ಸಂಜೆ ಊರಿನ ಮುಖ್ಯಬೀದಿಗಳಲ್ಲಿ ಸ್ವಾಮಿಯ ಪಲ್ಲಕ್ಕಿ ಉತ್ಸವ, ಸಂಧ್ಯಾ ಆರತಿ, ಪ್ರಸಾದ ವಿನಿಯೋಗ, ಸಾಯಿಸೇವಾ ಟ್ರಸ್ಟ್‌ ಬಳಗದಿಂದ ಶ್ರೀಸಾಯಿ ಲೀಲಾಮೃತ ನೃತ್ಯ ರೂಪಕ ಪ್ರದರ್ಶನ ನಡೆಯಿತು.

ADVERTISEMENT

ರಾತ್ರಿ ಶ್ರೇಯಾ ಆರತಿ ಮತ್ತು ಪ್ರಸಾದ ವಿನಿಯೋಗ ಮೂಲಕ ಕಾರ್ಯಕ್ರಮಕ್ಕೆ ತೆರೆಬಿದ್ದಿತು.

ಟ್ರಸ್ಟ್‌ನ ಎಂ.ಎಸ್.‌ ಪ್ರಸನ್ನಕುಮಾರ್‌, ಎಂ.ಎಸ್.‌ ಮಾರ್ಕಾಂಡೇಯ, ಕೆರೆ ಅಭಿಷೇಕ್, ಎಂ.ಎಸ್.‌ ಮಂಜುನಾಥ್‌, ವಿ.ಎನ್.‌ ರಾಜಶೇಖರ್‌, ಎಂ.ಕೆ. ಶ್ರೀವತ್ಸಾ, ಎಂ.ಪಿ. ಭೀಮರಾಜು, ಕನಕ ಸುರೇಶ್, ಎಂ.ಜೆ. ರಾಘವೇಂದ್ರ ಹಾಗೂ ವಿಶ್ವಸ್ಥ ಮಂಡಳಿ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.