ADVERTISEMENT

ಚಿಕ್ಕಜಾಜೂರಿನಲ್ಲಿ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:18 IST
Last Updated 13 ಜೂನ್ 2024, 14:18 IST
ಚಿಕ್ಕಜಾಜೂರಿನಲ್ಲಿ ಗುರುವಾರ ಮಧ್ಯಾಹ್ನ ಬಿರುಸಿನ ಮಳೆ ಸುರಿಯಿತು
ಚಿಕ್ಕಜಾಜೂರಿನಲ್ಲಿ ಗುರುವಾರ ಮಧ್ಯಾಹ್ನ ಬಿರುಸಿನ ಮಳೆ ಸುರಿಯಿತು   

ಚಿಕ್ಕಜಾಜೂರು: ಗುರುವಾರ ಮಧ್ಯಾಹ್ನ ಹೋಬಳಿ ವ್ಯಾಪ್ತಿಯ ಹಲವಡೆ ಬಿರುಸಿನ ಮಳೆಯಾಗಿದೆ. ಮೊದಲು 10 ನಿಮಿಷ, ಸ್ವಲ್ಪ ಸಮಯದ ನಂತರ 15 ನಿಮಿಷಗಳ ಕಾಲ ಬಿರುಸಾದ ಮಳೆ ಸುರಿಯಿತು. ಬುಧವಾರ ಮಧ್ಯಾಹ್ನವೂ ಹದವಾದ ಮಳೆಯಾಗಿತ್ತು. 

ಬಿತ್ತನೆ ಮಾಡಿದ್ದ ಹೊಲಗಳಿಗೆ ಮಳೆಯಿಂದ ಅನುಕೂಲವಾಗಿದೆ. ಕಳೆದ ವಾರ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಬಿತ್ತನೆ ನಂತರ ಸಾಲು ಮುಚ್ಚಿದ್ದ ಜಮೀನುಗಳಲ್ಲಿ ಒಣ ಮಣ್ಣು ಇದ್ದುದರಿಂದ ಮಳೆಯ ಅವಶ್ಯಕತೆ ಇತ್ತು. ಈಗ ಎರಡು ದಿನಗಳಿಂದ ಸ್ವಲ್ಪ ಮಳೆಯಾಗಿರುವುದರಿಂದ ನೆಲ ಹಸಿಯಾಗಿದ್ದು, ಮೆಕ್ಕೆಜೋಳ ಮೊಳಕೆಯೊಡೆದು ಸಾಲಾಗಿ ಕಾಣಿಸಿಕೊಂಡಿದೆ.

ಚಿಕ್ಕಜಾಜೂರಿನ ಜಮೀನೊಂದರಲ್ಲಿ ಐದಾರು ದಿನಗಳ ಹಿಂದೆ ಜಮೀನೊಂದರಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಚಿಗುರಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT