ADVERTISEMENT

ಸುಟ್ಟು ಹೋದ ಮನೆ; ಕುಟುಂಬದವರಿಗೆ ಗ್ರಾ.ಪಂ. ನೆರವು

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:46 IST
Last Updated 19 ಜೂನ್ 2024, 14:46 IST
ಹೊಸದುರ್ಗದ ಮೆಂಗಸಂದ್ರ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಮನೆ ಕಳೆದುಕೊಂಡ ಕುಟುಂಬಕ್ಕೆ ಗ್ರಾ.ಪಂ. ಅಧ್ಯಕ್ಷ ಹಾಗೂ ಸದಸ್ಯರು ದಿನಬಳಕೆಯ ಸಾಮಗ್ರಿಗಳನ್ನು ಹಸ್ತಾಂತರಿಸಿದರು
ಹೊಸದುರ್ಗದ ಮೆಂಗಸಂದ್ರ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಮನೆ ಕಳೆದುಕೊಂಡ ಕುಟುಂಬಕ್ಕೆ ಗ್ರಾ.ಪಂ. ಅಧ್ಯಕ್ಷ ಹಾಗೂ ಸದಸ್ಯರು ದಿನಬಳಕೆಯ ಸಾಮಗ್ರಿಗಳನ್ನು ಹಸ್ತಾಂತರಿಸಿದರು   

ಹೊಸದುರ್ಗ: ಮೆಂಗಸಂದ್ರ ಗ್ರಾಮದಲ್ಲಿ ಜೂನ್ 16ರಂದು ಸಿಲಿಂಡರ್ ಸ್ಫೋಟದಿಂದಾಗಿ ಸಂಪೂರ್ಣ ಭಸ್ಮವಾಗಿದ್ದ ಮನೆಯ ಮಾಲೀಕ ಕರಿಜೋಗಿ ರಮೇಶ್ ಅವರಿಗೆ ಕೈನಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸನ್ನಕುಮಾರ್ ನೆರವು ನೀಡಲಾಯಿತು. 

ಕೂಲಿ ಮಾಡಿ ಚಿಕ್ಕ ಮನೆ ಕಟ್ಟಿಕೊಂಡು ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದ ರಮೇಶ್ ಅವರ ಮನೆ ಆಕಸ್ಮಿಕ ಸಿಲಿಂಡರ್ ಸ್ಫೋಟದಿಂದ ಸುಟ್ಟು ಹೋಗಿತ್ತು. ಮನೆಯಲ್ಲಿದ್ದ ಬಳಿ ರಾಗಿ, ಜೋಳ ಹಾಗೂ ಮನೆಯ ಪರಿಕರಗಳು ಬೆಂಕಿಗೆ ಆಹುತಿಯಾಗಿದ್ದವು. ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರಾದ ಶೈಲಜಾ ಬಸವರಾಜ್, ಸಾಕಿಬಾಯಿ, ಚಿದಾನಂದ, ಪಿಡಿಒ ಶ್ರೀನಿಧಿ ಜಿ.ಆರ್., ಕಾರ್ಯದರ್ಶಿಗಳಾದ ಎಚ್. ಮಂಜಣ್ಣ ಹಾಗೂ ಇತರರು ಕುಟುಂಬಕ್ಕೆ ನೆರವಾಗಿದರು. 

ನಿರಾಶ್ರಿತರಿಗೆ ಧನಸಹಾಯ, ನಿತ್ಯಬಳಕೆಯ ದಿನಸಿ ಸಾಮಗ್ರಿ, ಅಡುಗೆ ಮಾಡಲು ಪಾತ್ರೆ ಉಪಕರಣಗಳು ಹಾಗೂ ಕುಟುಂಬದ ಎಲ್ಲಾ ಸದಸ್ಯರಿಗೆ ಬಟ್ಟೆಗಳನ್ನು ನೀಡಿದರು. ವಸತಿ ಯೋಜನೆಯಡಿಯಲ್ಲಿ ಮನೆ ಕೊಡುವುದಾಗಿ ಭರವಸೆ ನೀಡಲಾಯಿತು. ಕುಟುಂಬಕ್ಕೆ ಸಹಾಯಮಾಡಿದ ಗ್ರಾಮಸ್ಥರಿಗೂ ಗ್ರಾಮ ಪಂಚಾಯಿತಿ ಅಭಿನಂದಿಸಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.