ADVERTISEMENT

ಪರಶುರಾಂಪುರ | ಹಾಸ್ಟೆಲ್ ಕೊಠಡಿ ಶಿಥಿಲ: ಭೀತಿಯಲ್ಲಿ ವಿದ್ಯಾರ್ಥಿನಿಯರು

ಪರಶುರಾಂಪುರ: ಬಾಲಕಿಯರ ವಸತಿನಿಲಯದ ದುಃಸ್ಥಿತಿ

ತಿಮ್ಮಯ್ಯ .ಜೆ ಪರಶುರಾಂಪುರ
Published 28 ಆಗಸ್ಟ್ 2022, 4:04 IST
Last Updated 28 ಆಗಸ್ಟ್ 2022, 4:04 IST
ಪರಶುರಾಂಪುರ ಬಾಲಕಿಯರ ವಸತಿ ನಿಲಯದ ಚಾವಣಿಯ ಸಿಮೆಂಟ್‌ ಉದುರಿದೆ
ಪರಶುರಾಂಪುರ ಬಾಲಕಿಯರ ವಸತಿ ನಿಲಯದ ಚಾವಣಿಯ ಸಿಮೆಂಟ್‌ ಉದುರಿದೆ   

ಪರಶುರಾಂಪುರ: ಇಲ್ಲಿನ ಬಾಲಕಿಯರ ವಸತಿನಿಲಯದ ಕೊಠಡಿ ಶಿಥಿಲಗೊಂಡಿದೆ. ಚಾವಣಿಯ ಸಿಮೆಂಟ್‌ ಉದುರುತ್ತಿದ್ದು, ವಿದ್ಯಾರ್ಥಿನಿಯರು ಭೀತಿಯಲ್ಲಿ ಕಾಲಕಳೆಯುವಂತಾಗಿದೆ.

ಈ ವಸತಿನಿಲಯದಲ್ಲಿ53 ವಿದ್ಯಾರ್ಥಿನಿಯರು ಇದ್ದಾರೆ. ಸುತ್ತಲಿನ ಹಳ್ಳಿಗಳಾದ ಬೀರನಹಳ್ಳಿ, ಪುಟ್ಲೋರಹಳ್ಳಿ, ಕ್ಯಾದಿಗುಂಟೆ, ಕೊರ್ಲಕುಂಟೆ, ದೊಡ್ಡಚೆಲ್ಲೂರು, ಜಗ ಜೀವನರಾಂ ಕಾಲೊನಿ ಸೇರಿ ಹಲವೆಡೆಯಿಂದ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ತಂಗಿದ್ದಾರೆ. ವಸತಿನಿಲಯದಲ್ಲಿ 9 ಕೊಠಡಿಗಳಿವೆ. ಒಂದೆರೆಡು ಕೊಠಡಿಗಳನ್ನು ಹೊರತುಪಡಿಸಿ ಉಳಿದವು ಶಿಥಿಲಗೊಂಡಿದೆ.ಮೂಲ ಸೌಲಭ್ಯವೂ ಮರೀಚಿಕೆ ಎಂಬುದು ಪಾಲಕರ ಆರೋಪ.

53 ವಿದ್ಯಾರ್ಥಿಗಳಿಗೆ ಒಂದೇ ಶೌಚಗೃಹ: ಹಾಸ್ಟೆಲ್‌ನಲ್ಲಿ 53 ವಿದ್ಯಾರ್ಥಿಗಳಿದ್ದು, ಒಂದು ಶೌಚಾಲಯ, ಎರಡು ಸ್ನಾನದ ಕೊಠಡಿಗಳಿವೆ. ಇದರಿಂದ ವಿದ್ಯಾರ್ಥಿನಿಯರು ಪರದಾಡಬೇಕು. ಶೌಚಾಲಯಗಳ ಚಾವಣಿಯೂ ಕುಸಿದಿದೆ.

ADVERTISEMENT

ಊಟದ ಸಭಾಂಗಣ ಸುಸ್ಥಿತಿಯಲ್ಲಿದೆ. ಹೀಗಾಗಿ ವಿದ್ಯಾರ್ಥಿನಿಯರು ಶಿಥಿಲ ಕೊಠಡಿಗಳಲ್ಲಿ ಮಲಗಲು ಸಾಧ್ಯವಾಗದೆ
ಎಲ್ಲರೂ ಈ ಊಟದ ಹಾಲ್‌ನಲ್ಲೇ ಮಲಗುತ್ತಾರೆ ಎಂದು ಸ್ಥಳೀಯರಾದ ನಾಗರಾಜ್‌ದೂರಿದರು.

****

ಹಾಸ್ಟೆಲ್ ಕಟ್ಟಡ ಶಿಥಿಲಗೊಂಡಿದ್ದು, ಇಲಾಖೆಯಿಂದ ಕಟ್ಟಡ ನೆಲಸಮ ಮಾಡಲು ಒಪ್ಪಿಗೆ ಕೇಳಿ ಪತ್ರ ಬರೆದಿದ್ದೇವೆ. ಶೀಘ್ರದಲ್ಲಿ ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಿ ನೂತನ ಕಟ್ಟಡ ನಿರ್ಮಿಸಲು ಕ್ರಮ ವಹಿಸಲಾಗುವುದು.

-ಮಂಜುನಾಥ ಎನ್., ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ

****

ಕೂಡಲೇ ಹಾಸ್ಟೆಲ್ ಸ್ಥಳಾಂತರ ಮಾಡಬೇಕು. ಅನಾಹುತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.

-ಎ. ನಾಗರಾಜ್, ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.