ADVERTISEMENT

ನಗುವ ನಯನಗಳ ರಕ್ಷಣೆ ನಮ್ಮ ಹೊಣೆ: ನಟ ದೊಡ್ಡಣ್ಣ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 15:25 IST
Last Updated 4 ಅಕ್ಟೋಬರ್ 2024, 15:25 IST
ಸಿರಿಗೆರೆ ಸಮೀಪದ ಲಕ್ಷ್ಮಿಸಾಗರದಲ್ಲಿ ನಡೆದ ಉಚಿತ ನೇತ್ರ ಶಿಬಿರದಲ್ಲಿ ಚಿತ್ರ ನಟ ದೊಡ್ಡಣ್ಣ ಮಾತನಾಡಿದರು.
ಸಿರಿಗೆರೆ ಸಮೀಪದ ಲಕ್ಷ್ಮಿಸಾಗರದಲ್ಲಿ ನಡೆದ ಉಚಿತ ನೇತ್ರ ಶಿಬಿರದಲ್ಲಿ ಚಿತ್ರ ನಟ ದೊಡ್ಡಣ್ಣ ಮಾತನಾಡಿದರು.   

ಸಿರಿಗೆರೆ: ‘ನಯನಗಳು ನಮ್ಮ ಬದುಕಿಗೆ ಆಸರೆ. ಮುಖದ ಮೇಲೆ ನಗುನಗುತಿರುವ ನಯನಗಳನ್ನು ರಕ್ಷಿಸುವ ಹೊಣೆ ನಮ್ಮೆಲ್ಲರಾಗಬೇಕು’ ಎಂದು ಚಲನಚಿತ್ರ ನಟ ದೊಡ್ಡಣ್ಣ ಹೇಳಿದರು.

ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂದತ್ವ ನಿವಾರಣಾ ವಿಭಾಗ ಮತ್ತು ಲಕ್ಷ್ಮಿಸಾಗರ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಲಕ್ಷ್ಮಿಸಾಗರ ಗ್ರಾಮದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ವಿತರಣಾ ಶಿಬಿರದಲ್ಲಿ ಅವರು ಮಾತನಾಡಿದರು.

‘ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಸಲಹಾ ಶಿಬಿರಗಳನ್ನು ಆಗಾಗ್ಗೆ ಏರ್ಪಡಿಸಿ ಹಳ್ಳಿಗರ ಆರೋಗ್ಯದ ಕಡೆಗೆ ಗಮನ ನೀಡಬೇಕು’ ಎಂದರು.

ADVERTISEMENT

ಶಾಸಕ ವೀರೇಂದ್ರ ಪಪ್ಪಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರವೀಂದ್ರ, ಶಿಕ್ಷಕ ಕೆ.ಎಸ್. ಬಸವನಗೌಡ, ಲಕ್ಷ್ಮಿ ಸಾಗರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಸ್ವಾಮಿ, ಉಪಾಧ್ಯಕ್ಷೆ ಸುನಿತಾ ಮತ್ತು ಸದಸ್ಯರಾದ ವಸಂತ, ಎ.ಬಿ. ಧನಂಜಯ, ಅಶೋಕ್ ಕುಮಾರ್, ಸುರೇಶ್, ದೇವರಾಜ್, ಕವಿತಾ, ಅಲಿಖಾನ್, ಕೆ.ಸಿ.ನಾಗರಾಜ್, ಜಿಲ್ಲಾ ಕೆಡಿಪಿ ಸದಸ್ಯರು, ತಾಲ್ಲೂಕು  ಪಂಚಾಯಿತಿ ಇಒ ರವಿಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ. ಗಿರೀಶ್, ಆಡಳಿತ ವೈದ್ಯಾಧಿಕಾರಿ ಡಾ.ಜಯಶ್ರೀ, ನೇತ್ರಾಧಿಕಾರಿ ರಾಮು ಮತ್ತು ಬರ್ಕತ್ ಆಲಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಬಿ.ಜಾನಕಿ ಶಂಕರ್ ಕಣ್ಣಿನ ಆಸ್ಪತ್ರೆ ವೈದ್ಯರು ಹಾಜರಿದ್ದರು.

ಶಿಬಿರದಲ್ಲಿ 280 ಜನ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. 51 ಜನರಿಗೆ ಕಣ್ಣಿನಲ್ಲಿ ಪೊರೆ ಬಂದಿರುವುದನ್ನು ದೃಢೀಕರಿಸಲಾಯಿತು. 98 ಜನರಿಗೆ ದೃಷ್ಟಿ ದೋಷ ಇರುವುದನ್ನು ಗುರುತಿಸಲಾಗಿದ್ದು, ಅವರಿಗೆ ಉಚಿತ ಕನ್ನಡಕಗಳ ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.