ಹಿರಿಯೂರು: ನಟರಾದ ದಿವಂಗತ ರಾಜಕುಮಾರ, ವಿಷ್ಣುವರ್ಧನ್, ಶಂಕರ್ ನಾಗ್, ಅಪ್ಪು ಅವರಂತಹ ಕಲಾವಿದರು ಜನಮಾನಸದಲ್ಲಿ ಅಮರರಾಗಿ ಉಳಿದಿದ್ದಾರೆ ಎಂದು ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ ಅನಿಸಿಕೆ ವ್ಯಕ್ತಪಡಿಸಿದರು.
ನಗರದ ರೋಟರಿ ಸಭಾಭವನದಲ್ಲಿ ಶಂಕರ್ ನಾಗ್ ಅಭಿಮಾನಿಗಳ ಕಲಾ ವೇದಿಕೆ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಶಂಕರ್ ನಾಗ್ ಅವರ 70ನೇ ವರ್ಷದ ಜನ್ಮದಿನಾಚರಣೆ ಹಾಗೂ ರಾಜ್ಯಮಟ್ಟದ ಕರುನಾಡ ಕಲಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯೋತ್ಸವ ಪ್ರತಿ ಮನೆಯ ಹಬ್ಬವಾಗಬೇಕು. ಹಿರಿಯೂರು ನಗರದಲ್ಲಿ ಶಂಕರ್ ನಾಗ್ ಹೆಸರಿನಲ್ಲಿ ಕಲಾಭವನ ನಿರ್ಮಿಸಲು ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮನವಿ ಟ್ರಸ್ಟ್ ಅಧ್ಯಕ್ಷೆ ಮಾನಸ ಮಂಜುನಾಥ್, ಶಂಕರ್ ನಾಗ್ ಅಭಿಮಾನಿಗಳ ಕಲಾ ವೇದಿಕೆಯ ಅಧ್ಯಕ್ಷ ಎಚ್.ಸಿ.ದಿವು ಶಂಕರ್, ಕರ್ನಾಟಕ ಹಿತರಕ್ಷಣಾ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಬಸವರಾಜ್ ಮಾತನಾಡಿದರು. ರೈತ ಮುಖಂಡ ಕೆ.ಸಿ.ಹೊರೆಕೇರಪ್ಪ, ನಗರಸಭೆ ಸದಸ್ಯ ಎಂ.ಡಿ.ಸಣ್ಣಪ್ಪ, ಪರಶುರಾಮ್, ನಾಗೇಶ್ ಬಳ್ಳಾರಿ, ಬೆಂಗಳೂರಿನ ಇಂದ್ರಸುಧಾ, ವೆಂಕಟೇಶ್, ಜಗದೀಶ್, ಗಣೇಶ್, ರಂಗಸ್ವಾಮಿ, ಸಿದ್ದೇಶ್, ಮುತ್ತುರಾಜ್, ದಾವಣಗೆರೆ ಮಂಜುನಾಥ್, ಮುಖ್ಯಶಿಕ್ಷಕ ದಯಾನಂದ್, ಜಯಪ್ರಕಾಶ್, ಸರಸ್ವತಿ, ಸಿ.ಆರ್.ಪುಟ್ಟರಾಜು, ಕಿರಣ್ ಮಿರಜ್ಕರ್, ಜಗದೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.