ADVERTISEMENT

ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿ: ಬೆಂಗಳೂರು ನಗರ ತಂಡಕ್ಕೆ ಪ್ರಶಸ್ತಿ

ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿ; ಪುರುಷರ ವಿಭಾಗ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 3:14 IST
Last Updated 26 ಜುಲೈ 2022, 3:14 IST
ಹಿರಿಯೂರಿನ ನೆಹರೂ ಮೈದಾನದಲ್ಲಿ ಭಾನುವಾರ ರಾತ್ರಿ ಮುಕ್ತಾಯವಾದ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಹೊನಲು–ಬೆಳಕಿನ ಕೊಕ್ಕೊ ಅಸೋಸಿಯೇಷನ್ ಕಪ್–2022 ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ವಿಜೇತರಾದ ಬೆಂಗಳೂರು ನಗರ ತಂಡದ ಕ್ರೀಡಾಪಟುಗಳಿಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಆಕರ್ಷಕ ಟ್ರೋಫಿ ವಿತರಿಸಿದರು.
ಹಿರಿಯೂರಿನ ನೆಹರೂ ಮೈದಾನದಲ್ಲಿ ಭಾನುವಾರ ರಾತ್ರಿ ಮುಕ್ತಾಯವಾದ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಹೊನಲು–ಬೆಳಕಿನ ಕೊಕ್ಕೊ ಅಸೋಸಿಯೇಷನ್ ಕಪ್–2022 ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ವಿಜೇತರಾದ ಬೆಂಗಳೂರು ನಗರ ತಂಡದ ಕ್ರೀಡಾಪಟುಗಳಿಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಆಕರ್ಷಕ ಟ್ರೋಫಿ ವಿತರಿಸಿದರು.   

ಹಿರಿಯೂರು: ನಗರದ ನೆಹರೂ ಮೈದಾನದಲ್ಲಿ ಭಾನುವಾರ ರಾತ್ರಿ ಮುಕ್ತಾಯವಾದ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಹೊನಲು–ಬೆಳಕಿನ ಕೊಕ್ಕೊ ಅಸೋಸಿಯೇಷನ್ ಕಪ್–2022 ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಬೆಂಗಳೂರು ನಗರ ಜಿಲ್ಲೆಯ ತಂಡ ದಕ್ಷಿಣ ಕನ್ನಡ ಜಿಲ್ಲೆಯ ತಂಡವನ್ನು 17–15 ಅಂಕಗಳಿಂದ ಮಣಿಸುವ ಮೂಲಕ ಗೆಲುವಿನ
ನಗೆ ಬೀರಿತು.

ಕುತೂಹಲ ಮೂಡಿಸಿದ ಪಂದ್ಯ: ಬೆಂಗಳೂರು ನಗರ ಮತ್ತು ದಕ್ಷಿಣ ಕನ್ನಡ ತಂಡಗಳ ನಡುವಿನ ಪಂದ್ಯದ ಮೊದಲ ಅರ್ಧದಲ್ಲಿ ಬೆಂಗಳೂರು ತಂಡ 8 ಹಾಗೂ ದಕ್ಷಿಣ ಕನ್ನಡ ತಂಡ 9 ಅಂಕ ಪಡೆದರೆ, ಎರಡನೇ ಅವಧಿಯಲ್ಲಿ ಬೆಂಗಳೂರು ತಂಡ 9 ಮತ್ತು ದಕ್ಷಿಣ ಕನ್ನಡ ತಂಡ ಕೇವಲ 6 ಅಂಕಗಳನ್ನು ಮತ್ರ ಗಳಿಸಲು ಶಕ್ತವಾಯಿತು.

ನೆಹರೂ ಮೈದಾನದಲ್ಲಿ 13 ವರ್ಷಗಳ ನಂತರ ನಡೆದ ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿಯಿಂದಾಗಿ ನಗರದಲ್ಲಿ ಹಬ್ಬದ ವಾತಾವರಣ ಇತ್ತು. ಹೊನಲು–ಬೆಳಕಿನ ಪಂದ್ಯವಾದರೂ ಸಂಜೆಯ ನಂತರ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿತ್ತು. ಗುಂಪು ಗುಂಪಾಗಿ ಆಗಮಿಸುತ್ತಿದ್ದ ಪ್ರೇಕ್ಷಕರು, ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದರು.

ADVERTISEMENT

ಶಾಸಕಿ ಪೂರ್ಣಿಮಾ ಶ್ರೀನಿವಾಸ್, ರಾಜ್ಯ ಪ್ರವರ್ಗ–1 ರ ಒಕ್ಕೂಟದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್, ರಾಜ್ಯ ಕೊಕ್ಕೊ ಸಂಸ್ಥೆ ಅಧ್ಯಕ್ಷ ಲೋಕೇಶ್ವರ, ಕಾರ್ಯದರ್ಶಿ ಆರ್. ಮಲ್ಲಿಕಾರ್ಜುನಯ್ಯ, ಖಜಾಂಚಿ ವೆಂಕಟರಾಜ್, ಜಿಲ್ಲಾ ಕೊಕ್ಕೊ ಸಂಸ್ಥೆ ಅಧ್ಯಕ್ಷ ಪಿ. ತಿಪ್ಪೇಸ್ವಾಮಿ,
ಕಾರ್ಯದರ್ಶಿ ಒ. ಶ್ರೀನಿವಾಸ್, ನ್ಯೂ ಡೈಮಂಡ್ ಸಂಘದ ಅಧ್ಯಕ್ಷ ವಿ. ಮಂಜುನಾಥ್, ಉಪಾಧ್ಯಕ್ಷ ಎಚ್.ಆರ್. ಹರೀಶ್, ಗೌರವಾಧ್ಯಕ್ಷ ಕೊಟ್ರೇಶ್, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಅವರೂ ಕಾರ್ಯಕ್ರಮದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.