ADVERTISEMENT

17ರಂದು ವಿಠಲ ರುಕ್ಮಿಣಿ ಪಾದ ಮುಟ್ಟುವ ಪೂಜಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 14:46 IST
Last Updated 10 ಜುಲೈ 2024, 14:46 IST
ವಿಠ್ಠಲ ರುಕ್ಮಿಣಿ ದೇವರ ಮೂರ್ತಿ
ವಿಠ್ಠಲ ರುಕ್ಮಿಣಿ ದೇವರ ಮೂರ್ತಿ   

ಹಿರಿಯೂರು: ನಗರದ ದುರ್ಗಮ್ಮ ದೇವಸ್ಥಾನದ ಸಮೀಪ ಇರುವ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಜುಲೈ 17ರಂದು ಆಷಾಢ ಏಕಾದಶಿ ಪ್ರಯುಕ್ತ ಭಾವಸಾರ ಕ್ಷತ್ರಿಯ ಸಮಾಜದಿಂದ ಭಕ್ತರಿಗೆ ವಿಠಲ ರುಕ್ಮಿಣಿ ದೇವರ ಪಾದ ಮುಟ್ಟಿ ನಮಸ್ಕರಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಬಿ.ಕೆ. ಮಂಜುನಾಥ್ ರಾವ್ ತಿಳಿಸಿದ್ದಾರೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬಂದು ಭಕ್ತಿ ಸಮರ್ಪಿಸಬಹುದು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT