ಚಿಕ್ಕಜಾಜೂರು: ಹೊಳಲ್ಕೆರೆ ನ್ಯಾಯಾಲಯದಲ್ಲಿ ಈಚೆಗೆ ನಡೆದ ಲೋಕ ಅದಾಲತ್‌ನಲ್ಲಿ ವಿಚ್ಚೇದನ ಇಲ್ಲಿನ ದಂಪತಿಗಳಿಬ್ಬರು ವೈಮನಸ್ಸು ಮರೆತು ರಾಜಿ ಸಂಧಾನದ ಮೂಲಕ ಒಂದಾದರು.
ಗ್ರಾಮದ ಎನ್. ದಿವ್ಯಾ ಹಾಗೂ ಸಮೀಪದ ಅಂತಾಪುರ ಗ್ರಾಮದ ಮಾರುತಿ ಕೌಟುಂಬಿಕ ಕಲಹದಿಂದಾಗಿ ವಿಚ್ಚೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ನ್ಯಾಯಾಧೀಶರ ಸಂಧಾನದ ಬಳಿಕ ಲೋಕ ಅದಾಲತ್‌ನಲ್ಲಿ ಒಂದಾದರು.
ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಉಮೇಶ್, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಕೆ. ಶಿವಕುಮಾರ್, ಹೆಚ್ಚುವರಿ ಸರ್ಕಾರಿ ಅಭಿಯೋಜಕ ಜಿ.ಎಚ್. ಶಿವಕುಮಾರ್, ವಕೀಲರಾದ ಜಿ.ಎಂ. ಮುನೇಶ್ವರ, ಎಂ. ಪ್ರಸನ್ನಕುಮಾರ್, ಆರ್. ಹನುಮಂತಪ್ಪ, ಆರ್. ಲಕ್ಷ್ಮಣ್, ದಿವ್ಯಾ ತಾಯಿ ಅನ್ನಪೂರ್ಣಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.