ADVERTISEMENT

ಮಣ್ಣು ಮಿಶ್ರಿತ ಕಬ್ಬಿಣದ ಅದಿರು ಸಾಗಿಸುತ್ತಿದ್ದ ಲಾರಿ ವಶ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 16:00 IST
Last Updated 3 ಜುಲೈ 2024, 16:00 IST
ಹೊಸದುರ್ಗದ ಮಾಡದಕೆರೆ ಹೊರ ವಲಯದಲ್ಲಿ ಅದಿರು ಸಾಗಿಸುತ್ತಿದ್ದ ಲಾರಿ ವಶಪಡಿಸಿಕೊಂಡಿರುವುದು
ಹೊಸದುರ್ಗದ ಮಾಡದಕೆರೆ ಹೊರ ವಲಯದಲ್ಲಿ ಅದಿರು ಸಾಗಿಸುತ್ತಿದ್ದ ಲಾರಿ ವಶಪಡಿಸಿಕೊಂಡಿರುವುದು   

ಹೊಸದುರ್ಗ: ತಾಲ್ಲೂಕಿನ ಮಾಡದಕೆರೆ ಗ್ರಾಮದ ಹೊರವಲಯದಲ್ಲಿ ಬುಧವಾರ ರಾತ್ರಿ ಅಕ್ರಮವಾಗಿ ಕಬ್ಬಿಣದ ಅದಿರು ಹೊಂದಿರುವ ಮಣ್ಣನ್ನು ಲಾರಿಗೆ ತುಂಬುತ್ತಿದ್ದ ಮೂವರನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಹೊರಪೇಟೆಯ ನಿವಾಸಿ ಮಹಮ್ಮದ್ ತನ್ವೀರ್, ಮೊಳಕಾಲ್ಮುರು ತಾಲ್ಲೂಕಿನ ಬಿಜಿಕೆರೆ ಗ್ರಾಮದ ಸಮೀವುಲ್ಲಾ, ದಾವಣಗೆರೆ ನಗರದ ಮುಜಾಮಿಲ್ಲಾ ಬಂಧಿತರು.

ತಾಲ್ಲೂಕಿನ ಮಾಡದಕೆರೆ ಹೊರವಲಯದಲ್ಲಿ ಒಂದು ವಾರದ ಹಿಂದೆ ಈ ಮಣ್ಣು ಸಾಗಿ‌ಸಲಾಗಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸುತ್ತಿದ್ದು, ಬುಧವಾರ ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಅದಿರು ಕಳವು ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಹೊಸದುರ್ಗ ವಲಯ ಅರಣ್ಯ ಇಲಾಖೆ ಅಧಿಕಾರಿಗಳು 35 ಟನ್ ಅದಿರು, 4 ಲಾರಿ, 1 ಜೆಸಿಬಿಯನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಆರ್‌ಎಫ್‍ಒ ಸುನೀಲ್ ಕುಮಾರ್, ಡಿಆರ್‌ಎಫ್‍ಒ ಪ್ರಸನ್ನ, ಯೋಗೀಶ್, ಈಶ್ವರನಾಯ್ಕ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.