ADVERTISEMENT

ಹಿರಿಯೂರು: ಮಗಳ ಸಾವಿನ ದುಃಖ ತಾಳದೆ ತಂದೆ ಸಾವು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 15:16 IST
Last Updated 8 ಸೆಪ್ಟೆಂಬರ್ 2024, 15:16 IST
ಟಿ.ಷಣ್ಮುಗಂ
ಟಿ.ಷಣ್ಮುಗಂ   

ಹಿರಿಯೂರು: ತನ್ನ ಆರೈಕೆ ಮಾಡುತ್ತಿದ್ದ ಮಗಳು ಹಠಾತ್ ಸಾವನ್ನಪ್ಪಿದ ನೋವನ್ನು ತಾಳಲಾರದೆ ತಂದೆ ಮೃತಪಟ್ಟಿರುವ ಘಟನೆ ತಾಲ್ಲೂಕಿನ ದೊಡ್ಡಕಟ್ಟೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಹಿರಿಯ ರೈತ ಹೋರಾಟಗಾರ ಟಿ. ಷಣ್ಮುಗಂ (86) ಮೃತಪಟ್ಟವರು.

ತಮ್ಮ ಮೂವರು ಹೆಣ್ಣುಮಕ್ಕಳ ಪೈಕಿ ಒಬ್ಬರಾದ ಪದ್ಮ ಅವರು ಶುಕ್ರವಾರ ತೀರಿಕೊಂಡಿದ್ದರು. ಶನಿವಾರ ಅಂತ್ಯಕ್ರಿಯೆ ನೆರವೇರಿಸಿದ ನಂತರ ಷಣ್ಮುಗಂ ತೀವ್ರ ದುಃಖಿತರಾಗಿದ್ದರು. ಸಾವಿನ ನೋವಿನಿಂದ ಹೊರಬರಲಾದೇ ಅವರು ರಾತ್ರಿ ಕೊನೆಯುಸಿರೆಳೆದರು ಎಂದು ಕುಟುಂಬದವರು ತಿಳಿಸಿದ್ದಾರೆ.

ADVERTISEMENT

ಮೃತರಿಗೆ ಪತ್ನಿ, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಗ್ರಾಮದಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.