ಚಿತ್ರದುರ್ಗ: ಇಲ್ಲಿನ ಕೆಳಗೋಟೆಯಲ್ಲಿ ನಾಲ್ಕು ವರ್ಷದಿಂದ ಗೃಹಬಂಧನದಲ್ಲಿ ಇದ್ದ ಮಾನಸಿಕ ಅಸ್ವಸ್ಥ ತಿಪ್ಪೇಸ್ವಾಮಿ (65) ಎಂಬುವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಂಗಳವಾರ ಬಿಡುಗಡೆ ಮಾಡಿದರು.
ಮಾನಸಿಕ ಅಸ್ವಸ್ಥರಾಗಿದ್ದ ತಿಪ್ಪೇಸ್ವಾಮಿ ಅವರನ್ನು ಸಹೋದರರು ಗೃಹಬಂಧನದಲ್ಲಿ ಇಟ್ಟಿದ್ದರು. ಚಿಕ್ಕ ಹೆಂಚಿನ ಮನೆಯ ಕೋಣೆಯಲ್ಲಿ ಕುಡಿಹಾಕಿದ್ದರು. ನಿತ್ಯ ತಿಂಡಿ-ಊಟ ನೀಡುತ್ತಿದ್ದರು. ನಿತ್ಯ ಕರ್ಮಗಳು ಮನೆಯ ಕೋಣೆಯಲ್ಲೇ ನಡೆಯುತ್ತಿದ್ದವು.
ವ್ಯಕ್ತಿ ಗೃಹಬಂಧನದಲ್ಲಿ ಇರುವ ಬಗ್ಗೆ ವ್ಯಕ್ತಿಯೊಬ್ಬರು ಬಸವೇಶ್ವರ ವಿದ್ಯಾ ಸಂಸ್ಥೆಯ ಅನಾಥಾಶ್ರಮಕ್ಕೆ ಮಾಹಿತಿ ನೀಡಿದ್ದರು. ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಅನಾಥಾಶ್ರಮದ ಶಂಕರಪ್ಪ ಜಂಟಿ ಕಾರ್ಯಾಚರಣೆ ನಡೆಸಿದರು.
ಅಸ್ವಸ್ಥ ವ್ಯಕ್ತಿಯ ಕೈಕಾಲು ಸ್ವಾಧೀನ ಕಳೆದುಕೊಂಡಿವೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.