ADVERTISEMENT

ಹೊಸದುರ್ಗ: ವಿವಿಧ ಕಾಮಗಾರಿಗೆ ಶಾಸಕ ಬಿ.ಜಿ. ಗೋವಿಂದಪ್ಪ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 13:42 IST
Last Updated 19 ನವೆಂಬರ್ 2024, 13:42 IST
ಹೊಸದುರ್ಗದ ಬೆಸ್ಕಾಂ ಉಪಕೇಂದ್ರದ ಆವರಣದಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ಸೋಮವಾರ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು
ಹೊಸದುರ್ಗದ ಬೆಸ್ಕಾಂ ಉಪಕೇಂದ್ರದ ಆವರಣದಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ಸೋಮವಾರ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು    

ಹೊಸದುರ್ಗ: ಪಟ್ಟಣದ ಬೆಸ್ಕಾಂ ವಿದ್ಯುತ್ ಉಪಕೇಂದ್ರದ ಆವರಣದಲ್ಲಿ ₹ 3.65 ಕೋಟಿ ವೆಚ್ಚದಲ್ಲಿ ಬೆಸ್ಕಾಂ ಉಪವಿಭಾಗ ಕಚೇರಿ ಹಾಗೂ ಘಟಕ 1, 2ರ ಕಚೇರಿಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಜಿ.ಗೋವಿಂದಪ್ಪ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಲು ವಿದ್ಯುತ್ ವಿತರಣೆ ಹಾಗೂ ಸ್ವೀಕರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಿರಂತರ ವಿದ್ಯುತ್ ಸರಬರಾಜಿನಿಂದ ರೈತರು ಸೇರಿ ಎಲ್ಲರಿಗೂ ಅನುಕೂಲವಾಗಲಿದೆ. ಈಗಾಗಲೇ ಶ್ರೀರಾಂಪುರ ಬೆಸ್ಕಾಂ ಕಚೇರಿ ಕಟ್ಟಡ ನಿರ್ಮಾಣಗೊಂಡಿದೆ. ಹೊಸದುರ್ಗ ಬೆಸ್ಕಾಂ ಕಚೇರಿ ಹಳೆಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.

ಕೆಪಿಸಿಸಿ ಸದಸ್ಯರಾದ ಎಂ.ಪಿ.ಶಂಕರ್, ಅಲ್ತಾಫ್‌ ಪಾಷ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್, ಮುಖಂಡರಾದ ಪದ್ಮನಾಭ್, ಲೋಕೇಶಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ನಗರ ಘಟಕದ ಅಧ್ಯಕ್ಷ ಆಗ್ರೊ ಶಿವಣ್ಣ, ಕೆಡಿಪಿ ಜಿಲ್ಲಾ ಸದಸ್ಯ ದೀಪಿಕಾ ಸತೀಶ್, ಬೆಸ್ಕಾಂ ಸಮಿತಿ ಸದಸ್ಯರಾದ ಬಸವರಾಜ್, ಅನೂಷ್ ಜೈನ್, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಪುರಸಭಾ ಸದಸ್ಯರಾದ ಜಾಫರ್ ಸಾದಿಕ್, ಶಂಕರಣ್ಣ, ಉಪವಿಭಾಗಾಧಿಕಾರಿ ಕಿರಣ್ ರೆಡ್ದಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.