ADVERTISEMENT

ಮೊಳಕಾಲ್ಮುರು: ಗಮನ ಸೆಳೆದ ‘ಹಳ್ಳಿ ಸೊಗಡು’

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 14:12 IST
Last Updated 29 ಡಿಸೆಂಬರ್ 2023, 14:12 IST
ಮೊಳಕಾಲ್ಮುರಿನ ಸರ್ವೋದಯ ಹಾಗೂ ಚೈತನ್ಯ ಶಾಲೆಯಲ್ಲಿ ಶುಕ್ರವಾರ ಹಳ್ಳಿಸೊಗಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಮೊಳಕಾಲ್ಮುರಿನ ಸರ್ವೋದಯ ಹಾಗೂ ಚೈತನ್ಯ ಶಾಲೆಯಲ್ಲಿ ಶುಕ್ರವಾರ ಹಳ್ಳಿಸೊಗಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು   

ಮೊಳಕಾಲ್ಮುರು: ಪಟ್ಟಣದ ಸರ್ವೋದಯ ಹಾಗೂ ಚೈತನ್ಯ ಶಾಲೆಯಲ್ಲಿ ಶುಕ್ರವಾರ ಹಳ್ಳಿಸೊಗಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗ್ರಾಮೀಣ ಕಲೆಗಳು, ರೈತರ ಜೀವನಶೈಲಿ, ಜನರ ಆಚಾರ–ವಿಚಾರಗಳು ಅನವತಿಯತ್ತ ಸಾಗುತ್ತಿವೆ. ಇವುಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಹಳ್ಳಿ ಸೊಗಡು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಣುಕು ಪ್ರದರ್ಶನಗಳ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ವಿದ್ಯಾಸಂಸ್ಥೆ ಕಾರ್ಯದರ್ಶಿ ವನಿತಾ ಗಿರೀಶ್ ಹಾಗೂ ಮುಖ್ಯಶಿಕ್ಷಕ ಕೆ. ಉಮೇಶ್ ಯಾದವ್ ತಿಳಿಸಿದರು.

ಬಾವಿಯಿಂದ ನೀರು ಎತ್ತುವುದು, ಕಾಳು ಬೀಸುವುದು, ವಸ್ತು ಸಂಗ್ರಹಾಲಯ, ಗುರುಕುಲ, ಲಗೋರಿ ಆಟ, ಗುಡಿಸಲು, ಚುರುಮುರಿ ತಯಾರಿಕೆ, ಪಂಚಾಯಿತಿ ಕಟ್ಟೆ, ಹೂ ಕಟ್ಟುವುದು, ಕೊರವಂಜಿ, ಡಬ್ಬಿ ಅಂಗಡಿ, ವಾರದ ಸಂತೆ, ಕೌದಿ ಹೊಲಿಯುವುದು, ಗುಂಡುಕಲ್ಲು ಎತ್ತುವುದು, ಹೊಲದ ಕೆಲಸ, ಮೊರ ಬಳಿಯುವುದು, ಚಿಲ್ಲಿಕಾವು ಆಟ, ಗೋಲಿ ಆಟ, ಕುಂಟಬಿಲ್ಲೆ ಆಟ ಸೇರಿದಂತೆ ಹಲವು ಚಟುವಟಿಕೆಗಳನ್ನು ಪ್ರದರ್ಶಿಸಲಾಯಿತು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾದೇವಿ ಭೇಟಿ ನೀಡಿದ್ದರು. ಸಂಸ್ಥೆ ಮುಖ್ಯಸ್ಥ ಗಿರೀಶ್, ಶಿಕ್ಷಕರಾದ ಅನಿತಾ, ಫಾರ್ಜಾನ್, ಗೀತಾ, ಭಾಗ್ಯಲಕ್ಷ್ಮೀ, ಮಂಜುಳಾ, ಜೂಹಿನಾಜ್, ವನಜಾ, ಉಮಾ, ನುಸರತ್, ಶಶಿಕುಮಾರ್, ತಿಪ್ಪೇಸ್ವಾಮಿ, ಮಧು, ಸಾದಿಯಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.