ಚಿತ್ರದುರ್ಗ: ‘ನನ್ನ ಸೊಸೆ ಸಹನಾಗೆ ಸಹಜ ಹೆರಿಗೆಯಾಗಿದ್ದು ರೇಣುಕಸ್ವಾಮಿಯೇ ಹುಟ್ಟಿ ಬಂದಿದ್ದಾನೆ. ದೇವರ ಕೃಪೆಯಿಂದ ಸೊಸೆ ಹಾಗೂ ಮೊಮ್ಮಗ ಆರೋಗ್ಯವಾಗಿದ್ದಾರೆ’ ಎಂದು ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್ ಕಣ್ಣೀರು ಹಾಕಿದರು.
ರೇಣುಕಸ್ವಾಮಿ ಪತ್ನಿ ಸಹನಾ ಬುಧವಾರ ಬೆಳಿಗ್ಗೆ ಗಂಡು ಮಗುವಿಗೆ ಜನ್ಮನೀಡಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿ ‘ಕಳೆದ ನಾಲ್ಕು ತಿಂಗಳುಗಳಿಂದ ನಾವು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ನನ್ನ ಸೊಸೆ ಕೂಡ ತೀವ್ರ ನೋವಿನಲ್ಲಿದ್ದರು. ಆದರೂ ವೈದ್ಯರು ನನ್ನ ಸೊಸೆಗೆ ಸಹಜ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಚಿತವಾಗಿ ಚಿಕಿತ್ಸೆ ನೀಡಿದ ವೈದ್ಯ ಡಾ.ಮಲ್ಲಿಕಾರ್ಜುನಯ್ಯ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದರು.
ಚಿತ್ರದುರ್ಗ ನಗರದ ರೇಣುಕಸ್ವಾಮಿ ಪತ್ನಿ ಸಹನಾ ನಗರದ ಕೀರ್ತಿ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ರೇಣುಕಸ್ವಾಮಿ ಕೊಲೆಯಾದಾಗ ಸಹನಾ ಅವರು 5 ತಿಂಗಳ ಗರ್ಭಿಣಿಯಾಗಿದ್ದರು. ಬೆಳಿಗ್ಗೆ 6.55ರ ಸಮಯದಲ್ಲಿ ಅವರಿಗೆ ಸಹಜ ಹೆರಿಗೆಯಾಗಿದ್ದು ತಾಯಿ– ಮಗು ಆರೋಗ್ಯವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.