ADVERTISEMENT

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಸಂತ ಸೇವಲಾಲ್

ಮಕ್ಕಳ ತಜ್ಞ ಡಾ.ಚಂದ್ರನಾಯ್ಕ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 14:01 IST
Last Updated 15 ಫೆಬ್ರುವರಿ 2024, 14:01 IST
ಚಳ್ಳಕೆರೆಯಲ್ಲಿ ಸಂತ ಸೇವಲಾಲ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಸೇವಾಲಾಲ್‌ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಿದರು
ಚಳ್ಳಕೆರೆಯಲ್ಲಿ ಸಂತ ಸೇವಲಾಲ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಸೇವಾಲಾಲ್‌ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಿದರು   

ಚಳ್ಳಕೆರೆ: ಧಾರ್ಮಿಕ- ಆಧ್ಯಾತ್ಮಿಕ ರಾಯಭಾರಿ ಎಂದೇ ಹೆಸರಾಗಿದ್ದ ಸಂತ ಸೇವಲಾಲ್ ಮಹಾರಾಜರು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದರು ಎಂದು ಮಕ್ಕಳ ತಜ್ಞ ಡಾ.ಚಂದ್ರನಾಯ್ಕ ಅಭಿಪ್ರಾಯಪಟ್ಟರು.

ನಗರದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ ಸೇವಲಾಲ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೌಢ್ಯ, ಕಂದಾಚಾರ, ಅಸ್ಪೃಶ್ಯತೆ ಹಾಗೂ ಹಲವು ಸಾಮಜಿಕ ಕಟ್ಟುಪಾಡುಗಳನ್ನು ವಿರೋಧಿಸುವ  ಮೂಲಕ ಸಮುದಾಯದ ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದರು. ಸೇವಲಾಲ್ ಅವರ ತತ್ವ–ಆದರ್ಶಗಳನ್ನು ಯುವಜನರಿಗೆ ತಪ್ಪದೇ ಪರಿಚಯ ಮಾಡಿಕೊಡಬೇಕು ಎಂದು ಹೇಳಿದರು.

ADVERTISEMENT

ಸತ್ಯ, ನ್ಯಾಯಪರತೆ, ಆಹಿಂಸೆ, ತ್ಯಾಗ ಭಾವ ಬುಡಕಟ್ಟು ಸಂಸ್ಕೃತಿಯಲ್ಲಿ ಇಂದಿಗೂ ಕಂಡುಬಂರುತ್ತವೆ. ಸಮುದಾಯದ ಕಲೆ, ಸಂಸ್ಕೃತಿ ಹಾಗೂ ಮೌಖಿಕ ಪರಂಪರೆಯನ್ನು ಕಾಪಿಟ್ಟುಕೊಳ್ಳಬೇಕು ಎಂದು ತಹಶೀಲ್ದಾರ್ ರೇಹಾನ್ ಪಾಷ ಮುಖಂಡರಿಗೆ ಕಿವಿಮಾತು ಹೇಳಿದರು.

ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ರೇಖಲಗೆರೆ ಮಠದ ದೇನಾಭಗತ್ ಸ್ವಾಮೀಜಿ, ರಕ್ಷಿತಾ ಮಾತನಾಡಿದರು.

ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಸಂತ ಸೇವಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ವ್ಯವಸ್ಥಾಪಕಿ ಲೀಲಾವತಿ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್.ರೇವಣ್ಣ, ಸಮುದಾಯದ ಮುಖಂಡ ಗೋಪಾಲನಾಯ್ಕ, ಉಪನ್ಯಾಸಕ ಯಶವಂತ್, ರಾಜಣ್ಣ, ನಗರಸಭೆ ಸದಸ್ಯ ಮಲ್ಲಿಕಾರ್ಜುನ, ಪ್ರಕಾಶ್, ಕಾಂಗ್ರೆಸ್ ಯುವ ಮುಖಂಡ ಪುರುಷೋತ್ತಮ ನಾಯ್ಕ, ಬಲಿಜ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದನಾಯ್ಕ, ವೈದ್ಯ ಬಾಲಾಜಿ, ತಾಲ್ಲೂಕು ಕಚೇರಿ ದೊಡ್ಡೇರಿ ಶ್ರೀನಿವಾಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.