ADVERTISEMENT

ಪರಶುರಾಂಪುರ | ಕೆಟ್ಟಿವೆ ಸಿ.ಸಿ.ಟಿ.ವಿ ಕ್ಯಾಮೆರಾ: ಹೆಚ್ಚಿದೆ ಕಳ್ಳರ ಕೈಚಳಕ

ಪ್ರಜಾವಾಣಿ ವಿಶೇಷ
Published 15 ಏಪ್ರಿಲ್ 2024, 5:27 IST
Last Updated 15 ಏಪ್ರಿಲ್ 2024, 5:27 IST
<div class="paragraphs"><p>ಪರಶುರಾಂಪುರ ಗ್ರಾಮದ ಮುಖ್ಯವೃತ್ತದಲ್ಲಿನ ಸಿ.ಸಿ.ಟಿ.ವಿ ಕ್ಯಾಮೆರಾ ಹಾಳಾಗಿರುವುದು</p></div>

ಪರಶುರಾಂಪುರ ಗ್ರಾಮದ ಮುಖ್ಯವೃತ್ತದಲ್ಲಿನ ಸಿ.ಸಿ.ಟಿ.ವಿ ಕ್ಯಾಮೆರಾ ಹಾಳಾಗಿರುವುದು

   

ಪರಶುರಾಂಪುರ: ಆಂಧ್ರದ ಗಡಿಭಾಗದಲ್ಲಿರುವ ಪರಶುರಾಂಪುರ ಗ್ರಾಮದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇಲ್ಲಿನ ಪ್ರಮುಖ ಸ್ಥಳಗಳಲ್ಲಿ ಕಳ್ಳತನ ತಡೆಗೆ ಅಳವಡಿಸಿದ ಸಿ.ಸಿ.ಟಿವಿ ಕ್ಯಾಮೆರಾಗಳು ಹಾಳಾಗಿದ್ದು, ಇದು ಕಳ್ಳರಿಗೆ ವರದಾನವಾಗಿ ಪರಿಣಮಿಸಿದೆ.

ಗ್ರಾಮದ ಜನನಿಬಿಡ ಪ್ರದೇಶಗಳಲ್ಲಿ ಕಣ್ಮುಚ್ಚಿ ತೆಗೆಯುವುದರ ಒಳಗೆ ದ್ವಿಚಕ್ರ ವಾಹನಗಳನ್ನು ಕದಿಯುತ್ತಿರುವುದು ವಾಹನ ಸವಾರರ ನಿದ್ದೆಗೆಡಿಸಿದೆ. ಈಚೆಗೆ 10 ಬೈಕ್‌ಗಳು ಕಳವಾಗಿವೆ. ಮುಖ್ಯವೃತ್ತ, ನಾಡಕಚೇರಿ, ಸಮುದಾಯ ಆರೋಗ್ಯ ಕೇಂದ್ರದ ಬಳಿಯಲ್ಲಿ ಬೈಕ್‌ಗಳು ಕಳುವಾಗಿವೆ.

ADVERTISEMENT

ಸಿ.ಸಿ.ಟಿ.ವಿ ಕ್ಯಾಮೆರಾಗಳು ಹಾಳಾಗಿದ್ದೇ ಇದಕ್ಕೆ ಕಾರಣ ಎಂಬುಸು ಸ್ಥಳೀಯರ ದೂರು.

54ಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿಯ ಪರಶುರಾಂಪುರ ಠಾಣೆಯಲ್ಲಿ ಇಬ್ಬರು ಪಿಎಸ್ಐ ಇದ್ದಾರೆ. ಜಾಜೂರಿನಲ್ಲಿ ಒಂದು ಉಪಠಾಣೆಯು ಇದೆ. ಆದರೂ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ.

ದಾನಿಗಳ ನೆರವಿನಿಂದ ಗ್ರಾಮದ ಮುಖ್ಯವೃತ್ತ, ಚೌಳೂರು ಗೇಟ್, ಧರ್ಮಪುರ ರಸ್ತೆ, ಕಲ್ಯಾಣದುರ್ಗ ರಸ್ತೆ ಹಾಗೂ ಪಾವಗಡ ರಸ್ತೆಯ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಕಳೆದ ಒಂದು ವರ್ಷದಿಂದ ಕ್ಯಾಮೆರಾಗಳು ಹಾಳಾಗಿವೆ. ಇದರ ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ಬೈಕ್‌ ಕಳೆದುಕೊಂಡಿರುವ ಸ್ಥಳೀಯ ನಿವಾಸಿ ಚನ್ನಕೇಶವ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.