ನಾಯಕನಹಟ್ಟಿ: ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸಲು ವಿದ್ಯಾರ್ಥಿಗಳ ಕ್ರೀಡಾ ನಿಲಯಗಳನ್ನು ಶನಿವಾರ ಶಾಲಾ ಆವರಣದಲ್ಲಿ ರಚಿಸಲಾಯಿತು.
ಇದೇ ವೇಳೆ ಉಪಪ್ರಚಾರ್ಯ ಬಿ.ಆರ್.ರಮೇಶ್ ಮಾತನಾಡಿ, ‘ ಶಾಲೆಯಲ್ಲಿ ಹಲವು ಕ್ರಿಯಾತ್ಮಕ ಚಟುವಟಿಕೆಗಳು ನಡೆಯುತ್ತವೆ. ಆ ಎಲ್ಲಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮುಖ್ಯ. ಅವರನ್ನು ಸಂಪೂರ್ಣವಾಗಿ ತೊಡಗಿಸಲು ಗುಂಪುಗಳ ರಚನೆ ಅಗತ್ಯ. ಅದಕ್ಕಾಗಿ ವಿದ್ಯಾರ್ಥಿಗಳನ್ನು ಒಂದೊಂದು ತಂಡಕ್ಕೆ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕ್ರೀಡಾಕೂಟ, ವಲಯಮಟ್ಟ, ಹೋಬಳಿಮಟ್ಟ, ತಾಲ್ಲೂಕು, ಹಾಗೂ ಜಿಲ್ಲಾಮಟ್ಟದ ಕ್ರೀಡಾಕೂಟಗಳಲ್ಲಿ ವ್ಯವಸ್ಥಿತವಾಗಿಭಾಗವಹಿಸಲು ಸಹಕಾರಿ. ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾ ಕಾರಂಜಿ, ಅಣಕು ವಿಧಾನಸಭೆ, ಶೈಕ್ಷಣಿಕ ಪ್ರವಾಸ, ಚಿತ್ರಕಲಾ ಪ್ರದರ್ಶನ ಕ್ರೀಡಾನಿಲಯದ ಮೂಲಕವೇ ನಡೆಯುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಜತೆಗೆ ನಾಯಕತ್ವ ಗುಣ ಬೆಳೆಯುತ್ತದೆ ಎಂದರು.
ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ವೈ.ಟಿ.ಸ್ವಾಮಿ, ಶಿಕ್ಷಕರಾದ ವಿ.ಗೋವಿಂದಪ್ಪ, ಎಂ.ಫಣೀಂದ್ರ ಕುಮಾರ್, ಬಿ.ಉಮೇಶ್, ಡಿ.ಈರಣ್ಣ, ಎಚ್.ಹಾಲೇಶಪ್ಪ, ಎಸ್.ಆರ್.ವೀರೆಶ್, ಆರ್.ಬಸವರಾಜ, ಮಾರುತಿ, ಶಬ್ಬೀರ್, ತಿಮ್ಮರಾಜ, ದ್ವಿತೀಯದರ್ಜೆ ಸಹಾಯಕ ಮಹಮ್ಮದ್ ರಫೀಕ್‌ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.