ಹಿರಿಯೂರು: ‘ಆರ್‌ಎಸ್ಎಸ್ ಚಡ್ಡಿಗಳನ್ನು ರಾಜ್ಯದಾದ್ಯಂತ ಸುಡಲಾಗುವುದು’ ಎಂದು ಹೇಳಿಕೆ ನೀಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್‌ಗೆ ಕೊರಿಯರ್ ಮೂಲಕ ಚಡ್ಡಿಗಳನ್ನು ಕಳಿಸಿಕೊಡುವ ಮೂಲಕ ಭಾನುವಾರ ನಗರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
‘ಸಿದ್ದರಾಮಯ್ಯ ಹಾಗೂ ನಲಪಾಡ್ ತಮ್ಮ ಸ್ಥಾನದ ಘನತೆ ಮರೆತು ಚಡ್ಡಿ ಸುಡುವ ಮಾತುಗಳನ್ನಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವ ಹೇಳಿಕೆಯಲ್ಲ. ಈ ಇಬ್ಬರೂ ಸುಡಲು ಚಡ್ಡಿ ಹುಡುಕಾಟ ನಡೆಸುವುದು ಬೇಡ ಎಂದು ಕಾಂಗ್ರೆಸ್ ಕಚೇರಿಗೆ ಕಳಿಸುತ್ತಿದ್ದು, ನಾವು ಕಳಿಸಿರುವ ಚಡ್ಡಿಗಳನ್ನು ನಿಮ್ಮ ಪಕ್ಷದ ಕಚೇರಿಯಲ್ಲಿ ಸುಟ್ಟುಹಾಕಿ ಎಂದು ನಮ್ರತೆಯಿಂದ ಮನವಿ ಮಾಡುತ್ತೇವೆ. ಬೇಕಿದ್ದರೆ ಮತ್ತಷ್ಟು ಚಡ್ಡಿ ಕಳಿಸುವಂತೆ ರಾಜ್ಯದ ಹಿಂದೂಪರ ಸಂಘಟನೆಗಳಿಗೆ ಮನವಿ ಮಾಡಿಕೊಳ್ಳುತ್ತೇವೆ’ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತ ಶ್ರೀನಿವಾಸ್ ಮಸ್ಕಲ್ಹೇಳಿದರು.
ಗೋವರ್ಧನ್, ಗೋವಿಂದಾಚಾರ್, ಧನುಷ್, ರಾಹುಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.