ADVERTISEMENT

ಮೊಳಕಾಲ್ಮುರು: ರೈತರ ಸಂತಸ ಹೆಚ್ಚಿಸಿದ ವರುಣ

​ಪ್ರಜಾವಾಣಿ ವಾರ್ತೆ
Published 26 ಮೇ 2024, 3:08 IST
Last Updated 26 ಮೇ 2024, 3:08 IST
ಮೊಳಕಾಲ್ಮುರು ತಾಲ್ಲೂಕಿನ ಜೆ.ಬಿ.ಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಮಳೆ, ಗಾಳಿಗೆ ಹಾನಿಗೀಡಾಗಿರುವ ಬಾಳೆತೋಟ
ಮೊಳಕಾಲ್ಮುರು ತಾಲ್ಲೂಕಿನ ಜೆ.ಬಿ.ಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಮಳೆ, ಗಾಳಿಗೆ ಹಾನಿಗೀಡಾಗಿರುವ ಬಾಳೆತೋಟ    

ಮೊಳಕಾಲ್ಮುರು: ತಾಲ್ಲೂಕಿನಾದ್ಯಂತ ಶುಕ್ರವಾರ ಹೆಚ್ಚಿನ ಮಳೆಯಾಗಿದ್ದು, ಸಣ್ಣ ಪ್ರಮಾಣದ ಹಾನಿಗಳು ಸಂಭವಿಸಿವೆ.

ಮೊಳಕಾಲ್ಮುರು ಮಳೆಮಾಪನ ಕೇಂದ್ರದಲ್ಲಿ 34 ಮಿಮೀ, ರಾಯಾಪುರ ಕೇಂದ್ರದಲ್ಲಿ 45.32 ಮಿಮೀ, ಬಿ.ಜಿ.ಕೆರೆಯಲ್ಲಿ 38.4 ಮಿಮೀ, ರಾಂಪುರ ಕೇಂದ್ರದಲ್ಲಿ 16 ಮಿಮೀ ಹಾಗೂ ದೇವಸಮುದ್ರ ಮಾಪನ ಕೇಂದ್ರದಲ್ಲಿ 20.2 ಮಿಮೀ ಮಳೆ ದಾಖಲಾಗಿದೆ.

ರಾತ್ರಿ 9 ಗಂಟೆಗೆ ಭಾರಿ ಗಾಳಿ, ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ ಆಗಾಗ ವಿರಾಮ ನೀಡಿದರೂ ಬೆಳಗಿನ ಜಾವದವರೆಗೆ ಸುರಿಯುತು. ಅನೇಕ ಕಡೆ ಚೆಕ್‌ ಡ್ಯಾಂಗಳಿಗೆ ನೀರು ಹರಿದು ಬಂದಿದೆ. ಇದು ಈ ವರ್ಷ ಬಂದಿರುವ ದೊಡ್ಡ ಮಳೆಯಾಗಿದ್ದು, ಹಲವು ತಿಂಗಳುಗಳಿಂದ ಮಳೆಯನ್ನು ಕಾಣದ ತಾಲ್ಲೂಕಿನ ರೈತರಲ್ಲಿ ಉತ್ಸಾಹ ಹೆಚ್ಚಿಸಿದೆ. ಕೆಲವೆಡೆ ಬಿತ್ತನೆ ಶೇಂಗಾ ಕಾಯಿ ಖರೀದಿ ಕಂಡುಬಂದಿತು.

ADVERTISEMENT

‌ದೇವಸಮುದ್ರ ಹೋಬಳಿಯ ಓಬಳಾಪುರ ಹಾಗೂ ಜೆ.ಬಿ.ಹಳ್ಳಿಯಲ್ಲಿ ಕುಮಾರಿ, ಗಂಗಾರೆಡ್ಡಿ ಹಾಗೂ ಸಿದ್ದಲಿಂಗಪ್ಪ ಅವರಿಗೆ ಸೇರಿದ ಒಟ್ಟು 2 ಹೆಕ್ಟೇರ್‌ನಷ್ಟು ಬಾಳೆ ತೋಟ ಹಾನಿಗೀಡಾಗಿದೆ. ಚಿಕ್ಕೋಬನಹಳ್ಳಿ, ಮಾಚೇನಹಳ್ಳಿಯಲ್ಲಿ ಕೆಲ ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.